ಕಡಬ: ಅವಿವಾಹಿತ ಮಹಿಳೆ ನಾಪತ್ತೆ

(ನ್ಯೂಸ್ ಕಡಬ) Newskadaba.com ಕಡಬ, ಜು. 02. ಮಹಿಳೆಯೋರ್ವರು ನಾಪತ್ತೆಯಾದ ಘಟನೆ ತಾಲೂಕಿನ ದೋಳ್ಪಾಡಿಯಲ್ಲಿ ನಡೆದಿದೆ.

ನಾಪತ್ತೆಯಾದವರನ್ನು ಕಡಬ ತಾಲೂಕಿನ ದೋಳ್ಪಾಡಿ ಗ್ರಾಮದ ಕೂರೇಳು ಪಚ್ಚೋಳಿ ಎಂಬವರ ಪುತ್ರಿ ಲಲಿತಾ(30 ಎಂದು ಗುರುತಿಸಲಾಗಿದೆ. ಇವರು ತನ್ನ ಸಹೋದರನೊಂದಿಗೆ ವಾಸಿಸುತ್ತಿದ್ದರೆನ್ನಲಾಗಿದೆ. ಜೂನ್ 29ರಂದು ಸಹೋದರ ಹಾಗೂ ಆತನ ಪತ್ನಿ ಕೆಲಸಕ್ಕೆ ಹೋಗಿದ್ದು, ಸಂಜೆ ಮನೆಗೆ ಮರಳಿದಾಗ ಮನೆಗೆ ಬೀಗ ಹಾಕಿದ್ದು, ಬೀಗದ ಕೀ ಸ್ಥಳದಲ್ಲೇ ಬಿದ್ದಿತ್ತು. ಲಲಿತಾ ಅವರನ್ನು ಎಲ್ಲೆಡೆ ಹುಡುಕಾಡಿದರೂ ಅವರು ಪತ್ತೆಯಾಗದ ಕಾರಣ ಲಲಿತಾ ಅವರ ಸಹೋದರ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ ಕೆಲವು ದಿನಗಳಿಂದ ಆಗಾಗ ಮನೆಗೆ ಬರುತ್ತಿದ್ದ ಎಡಮಂಗಲದ ವ್ಯಕ್ತಿಯೋರ್ವನ ಜತೆ ಲಲಿತಾ ಅವರು ತೆರಳಿರುವ ಬಗ್ಗೆ ದೂರಿನಲ್ಲಿ ಸಂಶಯ ವ್ಯಕ್ತಪಡಿಸಿದ್ದಾರೆ. ಈ ಕುರಿತು ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ನಮಗೂ ಕಾಲ ಬಂದೇ ಬರುತ್ತದೆ: ಡಿ.ಕೆ.ಶಿವಕುಮಾರ್ ► ತನ್ನ, ಆಪ್ತರ ನಿವಾಸಕ್ಕೆ ನಡೆದ ಐಟಿ ದಾಳಿಗೆ ಉತ್ತರ

error: Content is protected !!
Scroll to Top