ಮಂಗಳೂರು: ತಂದೆಯೇ ಪುತ್ರನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣ ➤ ಚಿಕಿತ್ಸೆ ಪಡೆಯುತ್ತಿದ್ದ ಮಗ ಮೃತ್ಯು

(ನ್ಯೂಸ್ ಕಡಬ) Newskadaba.com ಮಂಗಳೂರು, ಜು. 02. ತಂದೆಯೇ ಸ್ವತಃ ಮಗನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣದಲ್ಲಿ ಗಂಭೀರ ಗಾಯಗಳೊಂದಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿದ್ದ ಪುತ್ರ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.


ಮೃತನನ್ನು ಆರೋಪಿ ವಿಶ್ವನಾಥ್ ಶೆಟ್ಟಿ ಪುತ್ರ ಸ್ವಾಮೀತ್ ಶೆಟ್ಟಿ (25) ಎಂದು ಗುರುತಿಸಲಾಗಿದೆ. ನಗರದ ಹೊರವಲಯದ ಜಪ್ಪಿನಮೊಗರು ಎಂಬಲ್ಲಿ ಜೂನ್ 21ರಂದು ರಾತ್ರಿ ದನ ಕಟ್ಟುವ ವಿಚಾರಕ್ಕೆ ಸಂಬಂಧಿಸಿ ಕೋಪಗೊಂಡ ವಿಶ್ವನಾಥ ಶೆಟ್ಟಿ ಪುತ್ರನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದನು. ಪರಿಣಾಮ ಗಂಭೀರ ಗಾಯಗೊಂಡ ಈತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಸ್ವಾಮೀತ್ ಶೆಟ್ಟಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

Also Read  ಅಂತರಾಷ್ಟ್ರೀಯ ಮಟ್ಟದ ‘ಕರಾಟೆ ಚಾಂಪಿಯನ್‍ಶಿಪ್- 2024’: ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಶಮಿರಾಜ್ ಆಳ್ವಗೆ ಬೆಳ್ಳಿಯ ಪದಕ

error: Content is protected !!
Scroll to Top