(ನ್ಯೂಸ್ ಕಡಬ) newskadaba.com ಕಡಬ, ಜು. 02. ಇಲ್ಲಿನ ಸೈಂಟ್ ಜೋಕಿಮ್ಸ್ ಚರ್ಚ್ ಬಿಲ್ಡಿಂಗ್‌ನಲ್ಲಿ ಬರ್ಲಿನ್ ಪುರುಷರ ಮದುವೆ ಉಡುಪುಗಳ ಮಳಿಗೆ ಜು. 01 ರಂದು ಶುಭಾರಂಭಗೊಂಡಿತು. ಕಡಬ ಠಾಣಾ ಪೋಲಿಸ್ ಉಪನಿರೀಕ್ಷಕ ರುಕ್ಮ ನಾಯ್ಕ್ ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಡಬ ಸೈಂಟ್ ಜೋಕಿಮ್ಸ್ ಚರ್ಚ್‌ನ ಧರ್ಮಗುರು ಫಾ/ ರೊನಾಲ್ಡ್ ಲೋಬೋ ಮಾತನಾಡಿ, ವ್ಯವಹಾರದಲ್ಲಿ ಸತ್ಯ, ನಿಷ್ಠೆ ಪ್ರಾಮಾಣಿಕತೆ ಇದ್ದರೆ ಯಶಸ್ಸು ಖಂಡಿತ ಸಾಧಿಸಬಹುದು, ಇದರಿಂದ ಗುಣಮಟ್ಟದ ವಸ್ತುಗಳನ್ನು ಮಾರಾಟ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಬೇಕು ಎಂದು ಸಲಹೆ ನೀಡಿದರು.
ಮಾಜಿ ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್ ಮಾತನಾಡಿ, ಬೆಳೆಯುತ್ತಿರುವ ಕಡಬದಲ್ಲಿ ಹೊಸ ಹೊಸ ಉದ್ಯಮಗಳು ಪ್ರಾರಂಭವಾಗುತ್ತಿರುವುದು ಒಳ್ಳೆಯ ಬೆಳವಣಿಗೆ, ಬರ್ಲಿನ್ ಪುರುಷರ ಮದುವೆ ಉಡುಪುಗಳ ಮಳಿಗೆ ಯಶಸ್ವಿಯಾಗಿ ಕಾರ್ಯನಿರ್ವಹಿಸಲಿ ಎಂದು ಹೇಳಿ ಶುಭ ಹಾರೈಸಿದರು. ಮಾಜಿ ಜಿಲ್ಲಾ ಪರಿಷತ್ ಸದಸ್ಯ ಹಾಜಿ ಸೈಯದ್ ಮೀರಾ ಸಾಹೇಬ್ ಮಾತನಾಡಿ, ಈಗಾಗಲೇ ಕಡಬದಲ್ಲಿ ಹೊಸ ಮಾದರಿಯ ಮದುವೆ ಉಡುಪುಗಳ ಮಳಿಗೆ ಶುಭಾರಂಭಗೊಂಡಿದೆ, ಇಲ್ಲಿ ಹೊಸ ಮಾದರಿಯ ಉಡುಪುಗಳನ್ನು ತಯಾರಿಸಿ ಕೊಡುವ ವ್ಯವಸ್ಥೆ ಇರುವುದು ಒಂದು ಒಳ್ಳೆಯ ಬೆಳವಣಿಗೆ. ಈ ಮಳಿಗೆಯ ಪ್ರಯೋಜನವನ್ನು ಈ ಊರಿನ ಜನರು ಪಡೆದುಕೊಳ್ಳಲಿ ಎಂದು ಹೇಳಿ ಶುಭ ಹಾರೈಸಿದರು. ಮಾಜಿ ಜಿ.ಪಂ. ಸದಸ್ಯ ಕೃಷ್ಣ ಶೆಟ್ಟಿ ಕಡಬ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪುತ್ತೂರು ಕೋಟಿ ಚೆನ್ನಯ್ಯ ಜೋಡುಕೆರೆ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಕಡಬ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್ ಪಿ.ಕೆ, ಎಸ್.ಡಿ.ಪಿ.ಐ. ಕಡಬ ವಲಯ ಅಧ್ಯಕ್ಷ ರಮ್ಲಾ ಸನ್‌ರೈಸ್, ಪುತ್ತೂರು ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅರ್ಶದ್ ದರ್ಬೆ, ಕಡಬ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಜಿ ಹನೀಫ್ ಕೆ.ಎಂ. ಆರ್ಕಿಟೆಕ್ಟ್ ಮತ್ತು ಇಂಟೀರಿಯರ್ ಡಿಸೈನರ್ ಸಫ್ವಾನ್, ಡಿಕೆಶಿ ಅಭಿಮಾನಿ ಬಳಗದ ಅಧ್ಯಕ್ಷ ಫೈಝಲ್ ಎಸ್.ಇ.ಎಸ್, ಕಡಬ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಶರೀಫ್, ಟೌನ್ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ಖಾದರ್, ಪ್ರಮುಖರಾದ ಅನ್ವರ್ ವೆರೈಟಿ, ಶಾಕಿರ್ ಮರ್ಧಾಳ ಆಗಮಿಸಿ ಶುಭ ಹಾರೈಸಿದರು. ಕಡಬ ಗ್ರಾ.ಪಂ. ಮಾಜಿ ಸದಸ್ಯ ಅಶ್ರಫ್ ಶೇಡಿಗುಂಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಪಾಲುದಾರರಾದ ಮನ್ಸೂರು ಬಪ್ಪಳಿಗೆ ಹಾಗೂ ಸವಾದ್ ಬಪ್ಪಳಿಗೆ ಮಾತನಾಡಿ, ನಮ್ಮಲ್ಲಿ ಶರ್ಟ್, ಪ್ಯಾಂಟ್, ಬಿಳಿ ವೇಸ್ಟಿ, ಕೋಟ್, ಶರ್ವಾನಿ, ಕುರ್ತಾ ಸೆಟ್ ಸೇರಿದಂತೆ ನವ ನವೀನ ಮಾದರಿಯ ಪುರುಷರ ಮದುವೆ ಉಡುಪುಗಳು ಲಭ್ಯವಿದ್ದು, ಮಳಿಗೆಯಲ್ಲಿಯೇ ಸ್ಟಿಚ್ ಮಾಡುವ ವ್ಯವಸ್ಥೆ ಇದೆ ಸರ್ವರೂ ಸಹಕರಿಸಬೇಕಾಗಿ ವಿನಂತಿಸಿದರು.