ಕಡಬ: ಆಯುಷ್ಮಾನ್ ಜೈನ್ ವೆಜ್ ರೆಸ್ಟೋರೆಂಟ್ ಶುಭಾರಂಭ

ಕಡಬ: ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ಅನುಗ್ರಹ ಸಭಾಭವನದ ಬಳಿಯಿರುವ ಶ್ರೀಹರಿ ಕಾಂಪ್ಲೆಕ್ಸ್ನಲ್ಲಿ ನೂತನವಾಗಿ ಆಯುಷ್ಮಾನ್ ಜೈನ್ ವೆಜ್ ರೆಸ್ಟೋರೆಂಟ್ ಜು.೧ರಂದು ಶುಭಾರಂಭಗೊAಡಿತು.


ಸAಸ್ಥೆಯನ್ನು ದೀಪ ಬೆಳಗಿಸಿದ ಶ್ರೀ ಕಾಂಪ್ಲೆಕ್ಸ್ನ ಮಾಲಕ ನಿವೃತ್ತ ಶಿಕ್ಷಕ ಸಾಂತಪ್ಪ ಗೌಡ ಪಿಜಕಳ ಮಾತನಾಡಿ ತಾಲೂಕು ಕೇಂದ್ರವಾಗಿ ಬೆಳೆಯುತ್ತಿರುವ ಕಡಬ ಪೇಟೆಯಲ್ಲಿ ಸುಸಜ್ಜಿತ ಸಸ್ಯಾಹಾರಿ ಉಪಹಾರ ಗೃಹದ ಅವಶ್ಯಕತೆ ಇತ್ತು ಅದನ್ನು ಆಯುಷ್ಮಾನ್ ಜೈನ್ ವೆಜ್ ರೆಸ್ಟೋರೆಂಟ್ ಪೂರೈಸಿದೆ. ಗ್ರಾಹಕರಿಗೆ ಉತ್ತಮ ಸೇವೆಯೊಂದಿಗೆ ಗುಣಮಟ್ಟದ ಊಟ, ಉಪಹಾರ ಹಾಗೂ ಇನ್ನಿತರ ಗ್ರಾಹಕರ ಅಗತ್ಯ ಆಹಾರದ ವ್ಯವಸ್ಥೆಯನ್ನು ಮಾಡುವುದರಿಂದ ಸಂಸ್ಥೆ ಉಜ್ವಲವಾಗಿ ಬೆಳಗಲಿದೆ. ಸಂಸ್ಥೆಗೆ ಕಡಬದ ಜನತೆಯ ಬೆಂಬಲ ಸದಾ ದೊರೆತು ಈ ಹೋಟೇಲು ಉದ್ಯಮ ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಶುಭ ಹಾರೈಸಿದರು.
ಸಂಸ್ಥೆಯ ಮಾಲಕ ಶಶಿಕಾಂತ ಹೆಗ್ಡೆ ಮಾತನಾಡಿ ಸುಸಜ್ಜಿತ ವ್ಯವಸ್ಥೆಯೊಂದಿಗೆ ಶುದ್ಧ ಸಸ್ಯಾಹಾರ ಉಪಹಾರ ಹಾಗೂ ಊಟದ ವ್ಯವಸ್ಥೆಯನ್ನು ಮಾಡಿದ್ದೇವೆ. ಹವಾ ನಿಯಂತ್ರಿತ ಫ್ಯಾಮಿಲಿ ರೂಂನ ಸೌಲಭ್ಯವಿದೆ, ಶುಭ ಸಮಾರಂಭಗಳಿಗೆ ಶುಚಿ ರುಚಿಯಾದ ಸಸ್ಯಹಾರಿ ಕ್ಯಾಟರಿಂಗ್ ವ್ಯವಸ್ಥೆಯನ್ನು ರಿಯಾಯಿತಿ ದರದಲ್ಲಿ ಮಾಡಿಕೊಡಲಾಗುವುದು ಎಂದು ಕಡಬದ ಜನತೆಯೆ ಸಹಕಾರ ಕೋರಿದರು.

Also Read  ಮುಳ್ಳೇರಿಯಾದಲ್ಲಿ ಭೀಕರ ರಸ್ತೆ ಅಪಘಾತ: ದಂಪತಿ ಸ್ಥಳದಲ್ಲೇ ಮೃತ್ಯು


ಈ ಸಂದರ್ಭದಲ್ಲಿ ಚಂದನ ಶಶಿಕಾಂತ, ಅರ್ಜುನ್ ಶಶಿಕಾಂತ, ನ್ಯಾಯವಾದಿ ಸಾತ್ವಿಕ್ ಆರಿಗ, ಅಕ್ಷತಾ ಸಾತ್ವಿಕ್, ಆಯುಷ್ಮಾನ್, ಐಶಾನಿ, ಪ್ರಮುಖರಾದ ಎನ್.ಧರನೇಂದ್ರ ಕುಮಾರ್, ಜಯವರ್ಮ ಬುಣ್ಣು, ಶ್ರೀಧರ ಆರಿಗ, ಪೂವಪ್ಪ ಗೌಡ, ವಿನಯಚಂದ್ರ ಜೈನ್, ಧೀರಜ್ ಕೆಲ್ಲ, ರಾಜೇಂದ್ರ ಹೆಗ್ಡೆ ಕಡಬಗುತ್ತು, ಮೂಡಬಿದ್ರೆ ನ್ಯೂ ಪಡಿವಾಳ್ಸ್ನ ಮಾಲಕ ಹರ್ಷವರ್ಧನ ಪಡಿವಾಳ್, ಅರ್ಕಕೀರ್ತಿ ಹೆಗ್ಡೆ, ಜಯಕೀರ್ತಿ ಹೆಗ್ಡೆ, ಸಂಪತ್ ಹೆಗ್ಡೆ, ಪದ್ಮಪ್ರಸಾದ್ ಮಾಣಿ, ಮಹಾವೀರ ಮಾಣಿ ಮತ್ತಿತರರು ಉಪಸ್ಥಿತರಿದ್ದು ಶುಭ ಹಾರೈಸಿದರು. ಅರ್ಚಕ ಮೂಡಬಿದ್ರೆಯ ಶ್ರೀಪತಿ ಭಟ್ ಕೇಳ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.

Also Read  ಶಕ್ತಿನಗರದ ಶಕ್ತಿ ಪದವಿ ಪೂರ್ವಕಾಲೇಜಿನಲ್ಲಿ ಎಂ.ಪಿ.ಎಲ್.ಎಂ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗಾಗಿ ಉಪನ್ಯಾಸ ಕಾರ್ಯಕ್ರಮ

error: Content is protected !!
Scroll to Top