ಮಕ್ಕಳ ಮೇಲೆ ಕೋವ್ಯಾಕ್ಸ್ ಲಸಿಕೆಗೆ ಅವಕಾಶವಿಲ್ಲ ➤ ತಜ್ಞರ ಸಮಿತಿ

(ನ್ಯೂಸ್ ಕಡಬ) Newskadaba.com ನವದೆಹಲಿ, ಜು. 01. ಕೋವಾಕ್ಸ್ ಕೊರೋನಾ ಲಸಿಕೆಯನ್ನುಎರಡರಿಂದ ಏಳು ವಯಸ್ಸಿನ ಮಕ್ಕಳ ಮೇಲೆ ಪ್ರಯೋಗಿಸಲು ಅವಕಾಶವಿಲ್ಲ ಎಂದು ಕೇಂದ್ರ ಔಷಧ ಪ್ರಾಧಿಕಾರ ತಜ್ಞರ ಸಮಿತಿ ಸೂಚಿಸಿದೆ. ಅಲ್ಲದೇ ಈ ಕುರಿತು ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ ಅವಕಾಶ ನೀಡಬಾರದು ಎಂದು ಸಮಿತಿ ತಿಳಿಸಿದೆ.

ದೇಶದ ಹತ್ತು ಕಡೆಗಳಲ್ಲಿ ಎರಡರಿಂದ ಹದಿನೇಳರ ವಯಸ್ಸಿನ ಸುಮಾರು 460 ಮಕ್ಕಳಿಗೆ ಕೋವಾಕ್ಸ್ ಪ್ರಯೋಗಕ್ಕೆ ಅನುಮತಿ ಕೋರಿ ಸೀರಂ ಇನ್ಸ್ಟಿಟ್ಯೂಟ್ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿತ್ತು, ಈ ಕುರಿತು ಚರ್ಚಿಸಿರುವ ತಜ್ಞರ ಸಮಿತಿ ಯಾವುದೇ ದೇಶದಲ್ಲಿ ಕೋವಾಕ್ಸ್ ಲಸಿಕೆಗೆ ಅವಕಾಶ ನೀಡಲಾಗಿಲ್ಲ ಎಂದು ವರದಿ ತಿಳಿಸಿದೆ.

error: Content is protected !!

Join the Group

Join WhatsApp Group