ನೆಕ್ಕಿತ್ತಡ್ಕ: ನಾಳೆ (ಜು.01) ‘ಯಶೋದಾ ರೆಸಿಡೆನ್ಸಿ’ ವಸತಿ ಸಮುಚ್ಚಯ ಶುಭಾರಂಭ ➤ 2BHK ವಾಸ್ತು ವಿನ್ಯಾಸದ 24 ಮನೆಗಳ ಬುಕ್ಕಿಂಗ್ ಆರಂಭ

(ನ್ಯೂಸ್ ಕಡಬ) newskadaba.com ಕಡಬ, ಜೂ.30. ಕಡಬ ತಾಲೂಕಿನ ಬಂಟ್ರ ಗ್ರಾಮದ ನೆಕ್ಕಿತ್ತಡ್ಕ ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡ ಕಡಬದ ಯಶೋದಾ ಸೂಪರ್ ಶಾಪ್ ನ ಸಹಸಂಸ್ಥೆ, ‘ಯಶೋದಾ ರೆಸಿಡೆನ್ಸಿ’ ವಸತಿ ಸಮುಚ್ಚಯವು ನಾಳೆ (ಜು.01) ರಂದು ಶುಭಾರಂಭಗೊಳ್ಳಲಿದೆ.

ಪ್ರಶಾಂತ ವಾತಾವರಣದಲ್ಲಿ 2 ಬೆಡ್ ರೂಮ್ ಗಳ ಸುಂದರ ವಾಸ್ತು ವಿನ್ಯಾಸ ಹೊಂದಿರುವ 24 ಮನೆಗಳಿದ್ದು, ಪ್ರತಿಯೊಂದು ಮನೆಯೂ ಬಾಲ್ಕನಿ ವ್ಯವಸ್ಥೆಯನ್ನು ಹೊಂದಿದೆ. ಕಡಬ ಪಟ್ಟಣದಿಂದ 2.8 ಕಿಮೀ ದೂರದಲ್ಲಿದ್ದು, ಆಕರ್ಷಕ ಬಾಡಿಗೆಯೊಂದಿಗೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ, ಶುದ್ಧವಾದ ನೀರಿನ ವ್ಯವಸ್ಥೆ, 24×7 ವಿದ್ಯುತ್ ವ್ಯವಸ್ಥೆ, ಹೊರಾಂಗಣ ವಿದ್ಯುತ್ ಸೌಲಭ್ಯ, ಅತ್ಯಾಧುನಿಕ ಮಿಂಚು ನಿರೋಧಕ, ಕೇಬಲ್ ನೆಟ್‌ವರ್ಕ್ ವ್ಯವಸ್ಥೆ, ಸಿಸಿ ಟಿವಿ ಕಣ್ಗಾವಲು ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಆಯ್ಕೆಯ ಫರ್ನಿಶ್ಡ್ ಮನೆಗಳು ಕೂಡಾ ಲಭ್ಯವಿದ್ದು, ವಿಶಾಲವಾದ ರೂಂಗಳನ್ನು ಹೊಂದಿರುವ ಮನೆಗಳ ಬುಕ್ಕಿಂಗ್ ಗಾಗಿ 94485 48339 ಅಥವಾ 96637 48339 ಸಂಖ್ಯೆಯನ್ನು ಸಂಪರ್ಕಿಸುವಂತೆ ಮಾಲಕರಾದ ದಯಾನಂದ ಪ್ರಭು ತಿಳಿಸಿದ್ದಾರೆ.

Also Read  ಚಿಕ್ಕೋಡಿ: ಭಾರಿ ಮಳೆಯಿಂದಾಗಿ ಓರ್ವ ವ್ಯಕ್ತಿ ಮೃತ್ಯು

 

 

 

error: Content is protected !!
Scroll to Top