ಮಿತಿಮೀರಿದ ಪೊಲೀಸಗ ತಪಾಸಣೆ ವೇಳೆ ಟೆಂಪೋ ಢಿಕ್ಕಿ ಹೊಡೆದೂ ಯುವಕ ಮೃತ್ಯು ➤ ಎಸ್ ವೈಎಸ್ & ಎಸ್ಸೆಸ್ಸೆಫ್ ಆತೂರು ತೀವ್ರ ಖಂಡನೆ

(ನ್ಯೂಸ್ ಕಡಬ) Newskadaba.com ಆತೂರು, ಜೂ. 30. ಕೋವಿಡ್ ನಿಮಿತ್ತ ರಾಜ್ಯದಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು, ಇದೀಗ ಮಧ್ಯಾಹ್ನ 2 ಗಂಟೆಯವರೆಗೆ ಎಲ್ಲಾ ಅಂಗಡಿಗಳು ತರೆಯಲು ಹಾಗೂ ಅಗತ್ಯಕ್ಕಾಗಿ ಹೊರಗಡೆ ತೆರಳಲು ಅನುಮತಿ ದೊರಕಿದೆ.
ಹೀಗಿದ್ದೂ ಕೂಡಾ ಆತೂರಿನಲ್ಲಿ 10 ಗಂಟೆಯಾಗುವಷ್ಟರಲ್ಲೇ ಕಡಬ ಪೊಲೀಸರು ಬಿಗಿಯಾದ ತಪಾಸಣೆ ನಡೆಸಿ ಯುವಕನೋರ್ವನ ಸಾವಿಗೆ ನೇರ ಕಾರಣರಾಗಿದ್ದಾರೆ.

ದೀರ್ಘ ಸಮಯದ ಲಾಕ್ ಡೌನ್ ನಿಮಿತ್ತ ಉದ್ಯೋಗ ಹಾಗೂ ಅಗತ್ಯಗಳನ್ನು ಕಳೆದುಕೊಂಡಿದ್ದ ಜನರು ಈಗಿನ ಸೀಮಿತ ಅನ್ ಲಾಕ್ ಅವಧಿಗಳಲ್ಲಿ ವ್ಯಾಪಾರ ಅಥವಾ ಅಗತ್ಯಗಳಿಗಾಗಿ ಹೊರಗಿಳಿಯುವ ಸಂದರ್ಭ ತಪಾಸಣೆಯ ಹೆಸರಲ್ಲಿ ಕಿರುಕುಳ ನೀಡಿ ಅಮಾಯಕ ಯುವಕನೋರ್ವನ ಸಾವಿಗೆ ಕಾರಣವಾದ ಪೊಲೀಸರ ವಿರುದ್ದ ಎಸ್.ವೈ.ಎಸ್ ಮತ್ತು ಎಸ್ಸೆಸ್ಸೆಫ್ ಆತೂರು ಯುನಿಟ್ ತೀವ್ರವಾಗಿ ಖಂಡಿಸುತ್ತದೆ. ಆತೂರಿನಲ್ಲಿ ಬಿಗಿಯಾದ ತಪಾಸಣೆಯನ್ನು ಮಾಡುತ್ತಿರುವ ಪೋಲೀಸರಿಗಾಗಿ ಸಾರ್ವಜನಿಕರು ನಿರ್ಮಿಸಿಕೊಟ್ಟ ತಾತ್ಕಾಲಿಕ ಶೆಡ್ ಇದೆ ಅಲ್ಲದೇ ಸರಕಾರದ ಅಥವಾ ಪೊಲೀಸ್ ಇಲಾಖೆಯ ಚೆಕ್ ಪೋಸ್ಟ್ ಇಲ್ಲ. ಅನ್ ಲಾಕ್ ಅವಧಿ ಸೀಮಿತವಿರುವ ಸಂದರ್ಭದಲ್ಲಿ ಜನರು ತಮ್ಮ ತಮ್ಮ ಅಗತ್ಯಗಳಿಗಾಗಿ ಓಡಾಡುವುದು ಸಹಜ ಹಾಗೂ ಅನಿವಾರ್ಯ. ಅದೇ ಸಮಯದಲ್ಲೇ ಹೆದ್ದಾರಿಯಲ್ಲಿ ಬ್ಯಾರಿಕೇಡ್ ಅಡ್ಡಗಟ್ಟಿ ತಪಾಸಣೆ ನಡೆಸಿ ಜನರನ್ನು ಗೊಂದಲಗೊಳಿಸುವ ನಡೆ ಅಮಾನವೀಯವಾಗಿದೆ. ಇದರಿಂದಲೇ ಅಮಾಯಕ ಯುವಕ ಪ್ರಾಣ ಕಳಕೊಳ್ಳಬೇಕಾಗಿದೆ.

Also Read  ಧರ್ಮದ ಹೆಸರಿನಲ್ಲಿ ನಡೆಯುವ ಕೊಲೆಗಳು ► ಸಾಮರಸ್ಯದ ಬೆಳಕು ಚೆಲ್ಲಿದ 'ಕೆಂಪುಕಾಡು' ಬೀದಿನಾಟಕ

ಕಡಬ ಪೊಲೀಸರ ಈ ನಡೆಯ ವಿರುದ್ದ ಈ ಹಿಂದೆಯೂ ಸಾರ್ವಜನಿಕರು ದೂರಿಕೊಂಡಿದ್ದು, ಮೇಲಾಧಿಕಾರಿಗಳ ನಿಷ್ಕ್ರೀಯತೆಯೇ ಇಂತಹ ಘಟನೆ ನಡೆಯಲು ಕಾರಣವಾಗಿದೆ. ಹಾಗಾಗಿ ಈ ಘಟನೆಯಲ್ಲಿ ತಪ್ಪಿತಸ್ಥ ಪೊಲೀಸರ ನಡೆಯನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಹಾಗೂ ಅಮಾಯಕ ಹಾರಿಸ್ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಎಸ್. ವೈ.ಎಸ್ ಮತ್ತು ಎಸ್ಸೆಸ್ಸೆಫ್ ಆತೂರು ಯುನಿಟ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Also Read  ಉಡುಪಿ ತ್ಯಾಜ್ಯ ಡಬ್ಬಿಯಲ್ಲಿ ನವಜಾತ ಹೆಣ್ಣು ಮಗು ಪತ್ತೆ

error: Content is protected !!
Scroll to Top