ಮುಸ್ಲಿಂ ಸಮುದಾಯ ಆರೋಗ್ಯ ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರ ಮಾಡುತ್ತಿರುವುದು ಶ್ಲಾಘನೀಯ ➤ ರಾಮಕುಂಜ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಜೆರಾಲ್ಡ್ ಮಸ್ಕರೇನಸ್

(ನ್ಯೂಸ್ ಕಡಬ) newskadaba.com ಆತೂರು, ಜೂ. 28. ಮುಸ್ಲಿಂ ಸಮುದಾಯವು ರಕ್ತದಾನ ಶಿಬಿರ ಹಾಗೂ ಆರೋಗ್ಯ ಜಾಗೃತಿ ಮೊದಲಾದಂತಹ ಕಾರ್ಯಕ್ರಮವನ್ನು ಎಸ್ ಕೆ ಎಸ್ ಎಸ್ ಎಫ್ ಆತೂರು ಕ್ಲಸ್ಟರ್ ಸಂಘಟನೆಯು ನಡೆಸುತ್ತಿರುವುದು ಶ್ಲಾಘನೀಯ, ಇಂತಹ ಅರೋಗ್ಯ ಜಾಗೃತಿ ಕಾರ್ಯಕ್ರಮಗಳು ಪ್ರತೀ ಸಮುದಾಯದಲ್ಲಿ ನಡೆಯುವುದು ಅಗತ್ಯವಿದೆ ಎಂದು ಆತೂರು ಬದ್ರಿಯಾ ಹಾಲ್ ನಲ್ಲಿ ನಡೆದ ಸಮಸ್ತ ಕೇರಳ ಜಮ್-ಇಯ್ಯತುಲ್ ಉಲಮಾ 95ನೇ ವರ್ಷದ ಪ್ರಯುಕ್ತ ಎಸ್ ಕೆ ಎಸ್ ಎಸ್ ಎಫ್ ಆತೂರು ಕ್ಲಸ್ಟರ್ ಸಮಿತಿ ವತಿಯಿಂದ ಆಯೋಜಿಸಿದ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಮಕುಂಜ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜೆರಾಲ್ಡ್ ಮಸ್ಕರೇನಸ್ ಮಾತನಾಡಿ ಅಭಿಪ್ರಾಯ ವ್ಯೆಕ್ತಪಡಿಸಿದರು.

ಈ ಸಂದರ್ಭದಲ್ಲಿ 109 ಮಂದಿ ರಕ್ತದಾನ ಮಾಡುವ ಮೂಲಕ ಎಸ್ ಕೆ ಎಸ್ ಎಸ್ ಎಫ್ ಆತೂರು ಸಮಿತಿಯು ಯಶ್ವಸಿಯಾಗಿದ್ದು, ಇದು ಶ್ಲಾಘನೀಯ ಎಂದರು. ಈ ವೇಳೆ ಕಂದಾಯ ಇಲಾಖೆ ಪ್ರತಿನಿಧಿಯಾಗಿ ಕೊಯಿಲ ಹಾಗೂ ರಾಮಕುಂಜ ಲೆಕ್ಕಧಿಕಾರಿ ಎನ್ ಶೇಷಾದ್ರಿ, ರಾಮಕುಂಜ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜೆರಾಲ್ಡ್ ಮಸ್ಕರೇನಸ್ ಹಾಗೂ ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಕಿಸಾನ್ ಸಮಿತಿ ಹಾಗು ರಾಮಕುಂಜ ಗ್ರಾಮ ಪಂಚಾಯತ್ ಸದಸ್ಯ ಯತೀಶ್ ಕುಮಾರ್ ಬಾಣಡ್ಕ ಇವರು ರಕ್ತದಾನ ಮಾಡಿದರು. ಎಸ್ಕೆಎಸ್ಸೆಸ್ಸೆಫ್ ಆತೂರು ಕ್ಲಸ್ಟರ್ ಇದರ ವತಿಯಿಂದ ಬದ್ರಿಯಾ ಜುಮಾ ಮಸೀದಿ ಆತೂರು ಇದರ ಸಹಕಾರದೊಂದಿಗೆ ಎಸ್ ಕೆ ಎಸ್ ಎಸ್ ಎಫ್ ವಿಖಾಯ ರಕ್ತದಾನಿ ಬಳಗ ಹಾಗು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸಹಬಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು.

Also Read  ದೇಶದ ಪ್ರತಿ ಪಂಚಾಯತ್ ನಲ್ಲಿ ಹಾಲಿನ ಡೈರಿ ಸ್ಥಾಪನೆ ➤ ಗೃಹ ಸಚಿವ ಅಮಿತ್ ಶಾ

ಆತೂರು ರೇಂಜ್ ಕಾರ್ಯದರ್ಶಿ ಕೆ.ಎಂ ಸಿದ್ದೀಕ್ ಫೈಝಿ ಕರಾಯ ಪ್ರಾರ್ಥನೆಗೆ ಚಾಲನೆ ನೀಡಿದರು.
ಎಸ್ ಕೆ ಎಸ್ ಎಸ್ ಎಫ್ ಆತೂರು ಕ್ಲಸ್ಟರ್ ಅಧ್ಯಕ್ಷರಾದ ಸಿದ್ದಿಕ್ ನೀರಾಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಸುಳ್ಯ ವಿಧಾನ ಸಭಾಕ್ಷೇತ್ರದ ಉಸ್ತುವಾರಿ ಕೃಷ್ಣಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಿಸಾನ್ ಸಮಿತಿ ಹಾಗೂ ರಾಮಕುಂಜ ಗ್ರಾಮ ಪಂಚಾಯತ್ ಸದಸ್ಯ ಯತೀಶ್ ಕುಮಾರ್ ಬಾಣಡ್ಕ, ನೆಲ್ಯಾಡಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸರ್ವೋತ್ತಮ ಗೌಡ, ಆತೂರು ಬದ್ರಿಯಾ ಜುಮಾ ಮಸೀದಿ ಇದರ ಮಾಜಿ ಅಧ್ಯಕ್ಷರಾದ ಆದಂ, ಇಂಡಿಯನ್ ರೆಡ್ ಕ್ರಾಸ್ ನ ಡಾ/ಜೆ.ಎನ್.ಭಟ್ ಹಾಗೂ ಪ್ರವೀಣ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬದ್ರಿಯಾ ಜುಮಾ ಮಸೀದಿ ಆತೂರು ಇದರ ಅಧ್ಯಕ್ಷ ಬಿ ಕೆ ಅಬ್ದುಲ್ ರಝಾಕ್, ಕೊಯಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಹರ್ಷಿತ್ ಕುಮಾರ್, ಕೊಯಿಲ ಹಾಗೂ ರಾಮಕುಂಜ ಗ್ರಾಮ ಪಂಚಾಯತ್ ನ ಲೆಕ್ಕಾಧಿಕಾರಿ ಎನ್ ಶೇಷಾದ್ರಿ, ಕೊಯಿಲ ಗ್ರಾಮ ಪಂಚಾಯತ್ ಸದಸ್ಯ ನಜೀರ್ ಕೊಯಿಲ, ರಾಮಕುಂಜ ಗ್ರಾಮ ಪಂಚಾಯತ್ ಸದಸ್ಯ ಎಚ್ ಅಬ್ದುಲ್ ರಹಿಮಾನ್, ಕೊಯಿಲ ಗ್ರಾಮ ಪಂಚಾಯತ್ ನ ಮಾಜಿ ಸದಸ್ಯ ಕೆ ಎ ಸುಲೈಮಾನ್, ಎಸ್ ಕೆ ಎಸ್ ಎಸ್ ಎಫ್ ವಿಖಾಯ ದಕ್ಷಿಣ ಕನ್ನಡ ಜಿಲ್ಲಾ ಚೇರ್ಮ್ಯಾನ್ ಇಸ್ಮಾಯಿಲ್ ತಂಙಳ್, ನಝೀರ್ ಕೊಯಿಲ ಪ್ರೆಸ್ ಕ್ಲಬ್ ಪುತ್ತೂರು, ಬಶೀರ್ ಮುಸ್ಲಿಯಾರ್, ಕುಂಡಾಜೆ ಜುಮಾ ಮಸೀದಿಯ ಖತೀಬ್ ಮುನೀರ್ ಅನ್ವರಿ, ಆತೂರು ರೇಂಜ್ ನ ಕೋಶಾಧಿಕಾರಿ ಬಿ ಕೆ ಅಬ್ದುಲ್ ಅಝೀಝ್, ಕುದ್ಲುರು ಜುಮಾ ಮಸೀದಿ ಇದರ ಅಧ್ಯಕ್ಷ ಕೆ ವೈ ಇಸ್ಮಾಯಿಲ್, ಪೊಡಿಕುಂಞಿ ನೀರಾಜೆ, ಆತೂರು ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಕಾರ್ಯದರ್ಶಿ ರಫೀಕ್ ಗಂಡಿಬಾಗಿಲು, ಉದ್ಯಮಿ ರಝಕ್ ಮುಬಾರಕ್, ಎಸ್ ಕೆ ಎಸ್ ಎಸ್ ಎಫ್ ಶಾಖೆ ಅಧ್ಯಕ್ಷರಾದ ಬಿ ಆರ್ ಅಬ್ದುಲ್ ಖಾದರ್, ಹಮೀದ್ ಕುಂಡಾಜೆ, ಅಶ್ರಫ್ ಕೋರೆಪದವು, ಇಸ್ಮಾಯಿಲ್ ಆತೂರುಬೈಲು, ಇಸ್ಮಾಯಿಲ್ ಪಾಲ್ತಾಡಿ ಹಾಗೂ ಆಸೀಫ್ ಗಂಡಿಬಾಗಿಲು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಅಝೀಜ್ ಪಾಲ್ತಾಡಿ, ಜೈನುದ್ದೀನ್ ಆತೂರು, ಉಮರುಲ್ ಫಾರೂಕ್ ಬಿ, ಅನ್ಸರ್ ನೀರಾಜೆ, ಮುನೀರ್ ಆತೂರು ಹಾಗು ಎಸ್ ಕೆ ಎಸ್ ಎಸ್ ಎಫ್ ನ ಕಾರ್ಯಕರ್ತರು ಸಹಕರಿಸಿದರು. ರಾಝಿಕ್ ಆತೂರು ಸ್ವಾಗತಿಸಿ, ಝಕರಿಯಾ ಮುಸ್ಲಿಯಾರ್ ವಂದಿಸಿದರು. ರಫೀಕ್ ಜಿ ನಿರೂಪಿಸಿದರು.

Also Read  ಪ್ರತ್ಯೇಕ ತುಳುವ ರಾಜ್ಯದ ಬೇಡಿಕೆಯೊಂದಿಗೆ ನೂತನ ಪಕ್ಷ ಅಸ್ತಿತ್ವಕ್ಕೆ ► ಪುತ್ತೂರು ವಿಧಾನಸಭಾ ಕ್ಷೇತ್ರದ ಸಸಂತ್ರ ತುಳುನಾಡು ಪಕ್ಷದ ಅಭ್ಯರ್ಥಿಯಾಗಿ ವಿದ್ಯಾಶ್ರೀ ಎಸ್. ಕಣಕ್ಕೆ

error: Content is protected !!
Scroll to Top