ಸುಬ್ರಹ್ಮಣ್ಯ: ಪರಿಶೀಲನಾ ಸಭೆಯಲ್ಲಿಆಶಾ ಕಾರ್ಯಕರ್ತೆಯರಿಗೆ ಸಚಿವರಿಂದ ದಿನಸಿ ಕಿಟ್ ವಿತರಣೆ

(ನ್ಯೂಸ್ ಕಡಬ) newskadaba,ಸುಬ್ರಹ್ಮಣ್ಯ ಜೂ.27:ಕೋವಿಡ್ ಸೋಂಕಿತರು ಕೇರ್ ಸೆಂಟರ್ ನಲ್ಲಿ ಇದ್ದುಕೊಂಡೆ ಚಿಕಿತ್ಸೆ ಪಡೆಯುವುದು ಉತ್ತಮ ಎಂದು ಸಚಿವ ಅಂಗಾರ ಹೇಳಿದ್ದಾರೆ. ಅವರು  ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಕೋವಿಡ್ ಪಾಸಿಟಿವ್ ವರದಿ ಬಂದವರು ಮನೆಯಲ್ಲಿ ಇರುವುದಕ್ಕಿಂತ ಆರೈಕೆ ಕೇಂದ್ರಗಳಲ್ಲಿ ಉಳಿಯುವುದು ಸೂಕ್ತ. ಮನೆಯಲ್ಲಿದ್ದರೆ ನೆರೆಹೊರೆಯವರಿಗೆ ಸೋಂಕು ಹರಡುವ ಸಂಭವ ಹೆಚ್ಚು. ಅದಕ್ಕಾಗಿ ಸಾರ್ವಜನಿಕರು ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಚಿಕಿತ್ಸೆ ಪಡೆಯಬೇಕು. ಆರೈಕೆ ಕೇಂದ್ರದಲ್ಲಿ ಆಹಾರ ಮತ್ತು ಔಷಧ ವಿತರಣೆ ವ್ಯವಸ್ಥಿತವಾಗಿ ನಡೆಯುತ್ತದೆ. ಸೋಂಕಿತರು ಭಯವಿಲ್ಲದೆ ಕೋವಿಡ್ ಮುಕ್ತರಾಗಬಹುದು ಎಂದು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್ ಅಂಗಾರ ಹೇಳಿದರು.ಸಚಿವರು ಸಭೆಯಲ್ಲಿ ಕೋವಿಡ್ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ತೆಯರಿಗೆ ದಿನಸಿ ಕಿಟ್ ವಿತರಿಸಿದರು.

error: Content is protected !!
Scroll to Top