ರಿಕ್ಷಾದಲ್ಲಿ ವಿಷ ಸೇವನೆಗೈದು ಆತ್ಮಹತ್ಯೆಗೆ ಯತ್ನಿಸಿದ ಚಾಲಕ

(ನ್ಯೂಸ್ ಕಡಬ) newskadaba,ಕಾರ್ಕಳ ಜೂ.27: ನಗರದ ಮಂಜುನಾಥ ಪೈ ಸಭಾಂಗಣ ಬಳಿಯ ದೇವರಗದ್ದೆ ರಸ್ತೆಯಲ್ಲಿ ಚಾಲಕನೊಬ್ಬ ರಿಕ್ಷಾದಲ್ಲಿ ವಿಷ ಸೇವನೆಗೈದು ಆತ್ಮಹತ್ಯೆಗೆ ಯತ್ನಿಸಿದ ಘಟನೆ  ನಡೆದಿದೆ.

ಚಿಕ್ಕಮಗಳೂರು ಮೂಲದವನಾಗಿದ್ದು, ಹಿರಿಯಂಗಡಿ ನಿವಾಸಿಯಾಗಿರುವ ಮಂಜುನಾಥ (34) ಎಂಬಾತ ವಿಷ ಸೇವನೆಗೈದವರು. ಇದೀಗ ಮಂಜುನಾಥನನ್ನು ಸ್ಥಳೀಯ ನಾಗರಿಕರು ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Scroll to Top