ಆತೂರು: ಸಮಸ್ತ ಸ್ಥಾಪಕ ದಿನಾಚರಣೆ

(ನ್ಯೂಸ್ ಕಡಬ) Newskadaba.com ಆತೂರು, ಜೂ. 27. ಸಮಸ್ತ ಸ್ಥಾಪಕ ದಿನದ ಪ್ರಯುಕ್ತ SKSSF ಆತೂರು ಶಾಖೆ ಹಾಗೂ ಆತೂರು ಮದ್ರಸ ಮ್ಯಾನೇಜ್ಮೆಂಟ್ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮವು ಶನಿವಾರದಂದು ಬದ್ರಿಯಾ ಜುಮಾ ಮಸೀದಿ ಸಭಾಂಗಣದಲ್ಲಿ ನಡೆಯಿತು.

ಧ್ವಜಾರೋಹಣವನ್ನು ಆತೂರು ಮದ್ರಸ ಮ್ಯಾನೇಜ್ ಮೆಂಟ್ ಹಾಗೂ ಬದ್ರಿಯಾ ಜುಮಾ ಮಸೀದಿ ಆತೂರು ಇದರ ಅಧ್ಯಕ್ಷರಾದ ಬಿ.ಕೆ ಅಬ್ದುಲ್ ರಝಾಕ್ ನೆರೆವೇರಿಸಿದರು. ಆತೂರು ರೇಂಜ್ ಇದರ ಪ್ರಧಾನ ಕಾರ್ಯದರ್ಶಿ, ಕೆ ಎಂ ಸಿದ್ದಿಕ್ ಫೈಝಿ ದುಆ ನೇತೃತ್ವ ನೀಡಿದರು. ಕಾರ್ಯಕ್ರಮದಲ್ಲಿ ಬಶೀರ್ ಮುಸ್ಲಿಯಾರ್, ಬಿ.ಆರ್ ಅಬ್ದುಲ್ ಖಾದರ್, ಸಿದ್ದಿಕ್ ನೀರಾಜೆ, ಝಕರಿಯಾ ಮುಸ್ಲಿಯಾರ್ ಆತೂರು, ಅಝೀಝ್ ಪಾಲ್ತಾಡಿ, ಫಾರೂಕ್ ಬಿ ಮತ್ತು ಜೈನುದ್ದೀನ್ ಆತೂರು ಮೊದಲಾದವರು ಉಪಸ್ಥಿತರಿದ್ದರು.

Also Read  ಸರ್ಕಾರಿ ಕಛೇರಿಗಳಲ್ಲಿ ತಂಬಾಕು ನಿಷೇಧ- ರಾಜ್ಯ ಸರಕಾರ ಆದೇಶ

error: Content is protected !!
Scroll to Top