ರಾತ್ರೋರಾತ್ರಿ ಅಕ್ರಮ ಮರಳುಗಾರಿಕಾ ಸ್ಥಳಕ್ಕೆ ದಾಳಿ ನಡೆಸಿದ ತಹಶೀಲ್ದಾರ್ ➤ ಆರೋಪಿಗಳು ಪರಾರಿ

(ನ್ಯೂಸ್ ಕಡಬ) Newskadaba.com ಬಂಟ್ವಾಳ, ಜೂ. 26. ಶುಕ್ರವಾರ ಮಧ್ಯರಾತ್ರಿಯಲ್ಲಿ ನದಿಯಿಂದ ಅಕ್ರಮವಾಗಿ ಮರಳು ತೆಗೆದು ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ಮಧ್ಯರಾತ್ರಿಯಲ್ಲಿಯೇ ಅರಣ್ಯಾಧಿಕಾರಿಗಳ ಜೊತೆ ದಾಳಿ ನಡೆಸಿದ ತಹಶೀಲ್ದಾರ್ ಮರಳುಗಾರಿಕೆಗೆ ಬಳಸಲಾದ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ಪಾಣೆಮಂಗಳೂರಿನಲ್ಲಿ ನಡೆದಿದೆ.


ಜಿಲ್ಲಾಡಳಿತದ ಆದೇಶದ ಪ್ರಕಾರ ಸುರಕ್ಷತಾ ದೃಷ್ಟಿಯಿಂದ ಸೇತುವೆಯ ಸಮೀಪ ಇಲಾಖೆ ನಿಗದಿಗೊಳಿಸಿದ ದೂರದವರೆಗೆ ಮರಳುಗಾರಿಕೆ ನಡೆಸಬಾರದು, ಆದರೂ ಪಾಣೆಮಂಗಳೂರಿನ ಹಳೆ ಸೇತುವೆಯಿಂದ ಅಕ್ರಮವಾಗಿ ರಾತ್ರಿ ವೇಳೆಯಲ್ಲಿ ಮೆಷಿನ್ ಬಳಸಿ ಮರಳು ತೆಗೆಯುವುದರ ಕುರಿತು ದೊರೆತ ಖಚಿತ ಮಾಹಿತಿಯ ಮೇರೆಗೆ ರಾತ್ರೋರಾತ್ರಿ ರಹಸ್ಯವಾಗಿ ಅರಣ್ಯಾಧಿಕಾರಿಗಳ ಜೊತೆ ತಹಶೀಲ್ದಾರ್ ರಶ್ಮಿ ಎಸ್.ಆರ್ ರವರು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಆರೋಪಿಗಳು ಮರಳುಗಾರಿಕೆಗೆ ಬಳಸಲಾದ ಟಿಪ್ಪರ್ ಹಾಗೂ ದೋಣಿಯೊಂದನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದರು. ಇದನ್ನು ವಶಪಡಿಸಿಕೊಂಡ ಅಧಿಕಾರಿಗಳು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Also Read  ಬಿಎಂಟಿಸಿ ಚಾಲಕನ ಜೇಬಿನಲ್ಲಿದ್ದ ಹಣ ಸೀಜ್ ಮಾಡಿದ ಅಧಿಕಾರಿಗಳು.!   ➤ ಹೈಕೋರ್ಟ್ ಮೊರೆ ಹೋದ ಚಾಲಕ                        

error: Content is protected !!
Scroll to Top