ಆಟವಾಡುತ್ತಿದ್ದ ವೇಳೆ ಸ್ಟೀಲ್ ಪಾತ್ರೆಯೊಳಗಡೆ ಸಿಲುಕಿದ ಮಗುವಿನ ತಲೆ ➤ ಅಗ್ನಿಶಾಮಕ ದಳದಿಂದ ರಕ್ಷಣೆ

(ನ್ಯೂಸ್ ಕಡಬ) newskadaba.com ಕಾಞಂಗಾಡು, ಜೂ. 25. ಮಗುವೊಂದು ಆಟವಾಡುತ್ತಿದ್ದ ವೇಳೆ ಸ್ಟೀಲ್ ಪಾತ್ರೆಯೊಳಗೆ ತಲೆ ಸಿಲುಕಿ ಹೊರತೆಗೆಯಲು ಒದ್ದಾಡಿದ ಘಟನೆ ನಡೆದಿದೆ.

ಕಾಞಂಗಾಡು ತೈಕಡಪ್ಪುರ ನಿವಾಸಿ ನಫೀಸಾ ಎಂಬವರ ಒಂದೂವರೆ ವರ್ಷದ ಮಗು ಸ್ಟೀಲ್ ಪಾತ್ರೆ ಹಿಡಿದುಕೊಂಡು ಆಟವಾಡುತ್ತಿದ್ದ ವೇಳೆ ಪಾತ್ರೆಯೊಳಗೆ ತನ್ನ ತಲೆಯನ್ನು ತುರುಕಿಸಿಕೊಂಡಿದೆ. ನಂತರ ಮನೆಯವರು ಮಗುವಿನ ತಲೆಯನ್ನು ಹೊರತೆಗೆಯಲು ಎಷ್ಟೇ ಪ್ರಯತ್ನಪಟ್ಟರೂ ಹೊರತೆಗೆಯಲು ಸಾಧ್ಯವಾಗಲಿಲ್ಲ. ಬಳಿಕ ಪೊಲೀಸರು ಬಂದು ಮಗುವನ್ನು ಅಗ್ನಿಶಾಮಕ ದಳದ ಕಛೇರಿಗೆ ಕೊಂಡೊಯ್ದು, ಅಲ್ಲಿ ಯಂತ್ರದ ಸಹಾಯದಿಂದ ಪಾತ್ರೆಯನ್ನು ತುಂಡರಿಸಿ ಮಗುವನ್ನು ರಕ್ಷಿಸಿದ್ದಾರೆ.

Also Read  85 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ..! ➤ ಆರೋಪಿ ಅರೆಸ್ಟ್

error: Content is protected !!
Scroll to Top