(ನ್ಯೂಸ್ ಕಡಬ) Newskadaba.com ಮಂಗಳೂರು, ಜೂ.25. ವೀಕೆಂಡ್ ಕರ್ಪ್ಯೂ ಹಿನ್ನೆಲೆ ಇಂದಿನಿಂದ ಸಂಜೆ 7ರಿಂದ ಸೋಮವಾರ ಬೆಳಿಗ್ಗೆ 7 ಗಂಟೆಯವರೆಗೆ ಜಿಲ್ಲಾದ್ಯಂತ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿ ರಾಜೇಂದ್ರ ಕೆವಿ ತಿಳಿಸಿದ್ದಾರೆ.
ವೀಕೆಂಡ್ ಕರ್ಫ್ಯೂ ಸಂದರ್ಭ ಹಾಲು ವಿತರಣಾ ಕೇಂದ್ರ, ಆಸ್ಪತ್ರೆ ಹಾಗೂ ಕೆಲವು ಸರ್ಕಾರಿ ಕಚೇರಿಗಳನ್ನು ಮಾತ್ರ ತೆರೆಯಲು ಅವಕಾಶವಿದ್ದು, ಇತರ ಯಾವುದೇ ಚಟುವಟಿಕೆಗಳಿರುವುದಿಲ್ಲ. ಸರ್ಕಾರಿ ಕಛೇರಿಗಳಿಗೆ ರಜೆ ಇರುವುದರಿಂದ ಜನರು ಓಡಾಡುವ ಅಗತ್ಯ ಇರುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ವೀಕೆಂಡ್ ಕರ್ಪ್ಯೂ ವೇಳೆ ಸರ್ಕಾರಿ ಹಾಗೂ ಇತರ ಖಾಸಗಿ ಕಟ್ಟಡ ಕಾಮಗಾರಿಗಳಿಗೆ ಅನುಮತಿ ಇದೆ. ನಿರಂತರ ಚಲನೆಯಲ್ಲಿರುವ ಕಾರ್ಖಾನೆಗಳಿಗೂ ವಿನಾಯಿತಿ ಇದೆ. ಹೋಟೆಲ್‌ಗಳಲ್ಲಿ ಪಾರ್ಸೆಲ್ ಕೊಡಲು ಮಾತ್ರವೇ ಅವಕಾಶವಿದೆ. ಹಾಗೆಯೇ ಮುಂಚೆಯೇ ನಿಗದಿಗೊಳಿಸಿ ಅನುಮತಿ ಪಡೆದ ಮದುವೆ ಹಾಗೂ ಇತರ ಸಮಾರಂಭಗಳಿಗೆ 25 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಉಪವಿಭಾಗ ಅಧಿಕಾರಿಗಳು ಹಾಗೂ ಸ್ಥಳೀಯ ಸಂಸ್ಥೆಯ ಅಧಿಕಾರಿಗಳಿಗೆ ಕೋವಿಡ್ ನಿಯಂತ್ರಣಾ ಕ್ರಮಗಳ ಬಗ್ಗೆ ಮೇಲುಸ್ತುವಾರಿ ನೋಡುವ ಜವಾಬ್ಧಾರಿಯನ್ನು ನೀಡಲಾಗಿದೆ.