ಟಿಪ್ಪು ಸುಲ್ತಾನ್, ಸಿದ್ದರಾಮಯ್ಯರವರ ಅವಹೇಳನ ► ಉಪ್ಪಿನಂಗಡಿ ಯುವ ಕಾಂಗ್ರೆಸ್ ನಿಂದ ದೂರು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಅ.27. ಸ್ವಾತಂತ್ರ ಸೇನಾನಿ ಟಿಪ್ಪು ಸುಲ್ತಾನ್ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರವನ್ನು ಅಸಹ್ಯವಾಗಿ ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ ಎಂದು ಆರೋಪಿಸಿ ಉಪ್ಪಿನಂಗಡಿ ಪರಿಸರದ ಇಬ್ಬರ ಮೇಲೆ ಯುವ ಕಾಂಗ್ರೆಸ್ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದೆ.


34ನೇ ನೆಕ್ಕಿಲಾಡಿಯಲ್ಲಿನ ಕಾರ್ ಕ್ಲಬ್ ಮಾಲಕ ಸದಾನಂದ ಹಾಗೂ ಯೊಗೀಶ್ ಪ್ರಭು ಅವರ ಮೇಲೆ ದೂರು ದಾಖಲಾಗಿದ್ದು, ಯೊಗೀಶ್ ಪ್ರಭು ಎಂಬವರು ಸ್ವಾತಂತ್ರ್ಯ ಸೇನಾನಿ ಟಿಪ್ಪು ಸುಲ್ತಾನ್ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾವಚಿತ್ರದ ಮುಖವನ್ನು ನಗ್ನ ಚಿತ್ರಕ್ಕೆ ಅಂಟಿಸಿ ಅಸಹ್ಯವಾಗಿ ಬಿಂಬಿಸಿ, ತನ್ನ ಫೇಸ್ಬುಕ್ನಲ್ಲಿ ಹಾಕಿದ್ದು, ಅದನ್ನು ಸದಾನಂದ ಕಾರ್ಕ್ಲಬ್ ಎಂಬವರು ತನ್ನ ಫೇಸ್ಬುಕ್ಗೆ ಹಂಚಿಕೊಂಡಿದ್ದಾರೆ. ಇದು ಒಂದು ಸಮುದಾಯವನ್ನು ಎತ್ತಿಕಟ್ಟುವ ಮೂಲಕ ಕೋಮು ಗಲಭೆ ಸೃಷ್ಟಿಸುವ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿರುವ ಯುವ ಕಾಂಗ್ರೆಸ್, ಆರೋಪಿಗಳನ್ನು ತಕ್ಷಣ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದೆ.

Also Read  ವ್ಯಕ್ತಿ ಕಾಣೆಯಾಗಿದ್ದಾರೆ

error: Content is protected !!
Scroll to Top