(ನ್ಯೂಸ್ ಕಡಬ) newskadaba.com ಕಡಬ, ಅ.27. ಸರಕಾರವು ಟೆಂಪೋಗಳಲ್ಲಿ ಮರಳನ್ನು ಸಾಗಿಸಲು ಶೀಘ್ರದಲ್ಲೇ ಅನುಮತಿ ನೀಡಬೇಕು ಎಂದು ಕಡಬ ತಾಲ್ಲೂಕು ಟೆಂಪೋ ಚಾಲಕ ಮಾಲಕರ ಸಂಘದ ವತಿಯಿಂದ ಕಡಬ ತಹಶಿಲ್ದಾರರ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ನೀಡಲಾಯಿತು.
ಕಡಬ ಪರಿಸರದಲ್ಲಿ ಸುಮಾರು 32 ಟೆಂಪೋ ವಾಹನಗಳಿದ್ದು, ಟೆಂಪೋದಲ್ಲಿ ಮರಳನ್ನು ಸಾಗಾಟ ಮಾಡುವ ಮೂಲಕ ಕುಟುಂಬವನ್ನು ನಿರ್ವಹಿಸುತ್ತಾ ಬಂದಿರುತ್ತೇವೆ. ಆದರೆ ಸರಕಾರವು ಏಕಾಏಕಿ ಮರಳು ಸಾಗಾಟ ಮಾಡಲು ಅನುಮತಿ ನಿರಾಕರಿಸಿದ್ದು, ಇದರಿಂದಾಗಿ ಮರಳುಲೋಡು ಮಾಡುತ್ತಿರುವ ಸುಮಾರು 250 ಕ್ಕೂ ಅಧಿಕ ಕಾರ್ಮಿಕರು ಸೇರಿದಂತೆ ಅವರ ಕುಟುಂಬವನ್ನು ಸಾಕಲು ಕಷ್ಟಕರವಾಗಿರುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.