ಹಳೆನೇರಂಕಿ: ಅಕ್ರಮ ಮದ್ಯ ಮಾರಾಟದ ವೇಳೆ ಅಬಕಾರಿ ಅಧಿಕಾರಿಗಳ ದಾಳಿ ➤ ದ್ವಿಚಕ್ರ ವಾಹನ ಸಹಿತ ಮದ್ಯ ವಶಕ್ಕೆ, ಆರೋಪಿ ಪರಾರಿ

ಕಡಬ, ಜೂ.22. ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿರುವ ಅಬಕಾರಿ ಇಲಾಖೆಯ ಅಧಿಕಾರಿಗಳು ದ್ವಿಚಕ್ರ ವಾಹನ ಸಹಿತ ಮದ್ಯದ ಪ್ಯಾಕೆಟ್ ವಶಪಡಿಸಿಕೊಂಡ ಘಟನೆ ಕಡಬ ತಾಲೂಕಿನ ಹಳೆನೇರಂಕಿ ಎಂಬಲ್ಲಿ ಮಂಗಳವಾರದಂದು ನಡೆದಿದೆ.

ಹಳೆನೇರಂಕಿ ಜಂಕ್ಷನ್‌ನಲ್ಲಿರುವ ಗೋಳಿಮರದ ಅಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು 90 ಎಂಎಲ್‌ನ 31 ಪ್ಯಾಕೇಟ್ ಮದ್ಯ ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದು, ಈ ವೇಳೆ ಆರೋಪಿ ಹಳೆನೇರಂಕಿ ನಿವಾಸಿ ಕಾಳಪ್ಪ ಪೂಜಾರಿ ಎಂಬವರ ಪುತ್ರ ಪ್ರಮೋದ್ ಸ್ಥಳದಿಂದ ಪರಾರಿಯಾಗಿದ್ದಾನೆ.

Also Read  ಬಲ್ಯ: ನಾಪತ್ತೆಯಾಗಿದ್ದ ಯುವತಿಯನ್ನು ಪತ್ತೆಹಚ್ಚಿದ ಪೊಲೀಸರು

 

 

 

 

error: Content is protected !!
Scroll to Top