ಅಘೋಷಿತ ತುರ್ತುಪರಿಸ್ಥಿತಿಯ ಈ ಸನ್ನಿವೇಶದಲ್ಲಿ ಸಂವಿಧಾನದ ಮೌಲ್ಯಗಳನ್ನು ಕಾಪಾಡಲು ಕ್ಯಾಂಪಸ್ ಫ್ರಂಟ್ ರಾಷ್ಟ್ರವ್ಯಾಪಿ ಅಭಿಯಾನ

(ನ್ಯೂಸ್ ಕಡಬ) Newskadaba.com ಜೂ. 22. ಸಮರ್ಥ ಲಿಖಿತ ಸಂವಿಧಾನವನ್ನು ಹೊಂದಿರುವ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತವು 1975-77ರಲ್ಲಿ ‘ರಾಷ್ಟ್ರೀಯ ತುರ್ತುಸ್ಥಿತಿ’ಯನ್ನು ಎದುರಿಸಬೇಕಾಗಿ ಬಂದಿತ್ತು. ಈ ಅವಧಿಯಲ್ಲಿ, ಸಂವಿಧಾನವನ್ನು ಅಮಾನತುಗೊಳಿಸಿದ ನಂತರ ನಾಗರಿಕರ ಮೂಲಭೂತ ಹಕ್ಕುಗಳ ಮೇಲೆ ದಾಳಿ ನಡೆಸಲಾಯಿತು. ವಿರೋಧ ಪಕ್ಷಗಳು ಮತ್ತು ನಾಯಕರನ್ನು ಮೌನಗೊಳಿಸಿ ಜೈಲಿಗೆ ತಳ್ಳಲಾಯಿತು. ನಾಲ್ಕನೇ ಸ್ಥಂಭವಾದ ಮಾಧ್ಯಮ ಮತ್ತು ಪತ್ರಿಕಾ ಕಾರ್ಯ ಚಟುವಟಿಕೆಗಳನ್ನು ತಡೆಹಿಡಿಯಲಾಯಿತು. ದಮನಕಾರಿ ಕಾನೂನುಗಳನ್ನು ಬಳಸಿಕೊಂಡು ಭಿನ್ನಾಭಿಪ್ರಾಯದ ಧ್ವನಿಗಳಿಗೆ ವಾಗ್ಬಂಧನ ವಿಧಿಸಲಾಯಿತು. ಭಾರತೀಯ ಪ್ರಜಾಪ್ರಭುತ್ವವು 21 ತಿಂಗಳುಗಳ ನಂತರ ಗಂಭೀರ ಹಾನಿಯೊಂದಿಗೆ ಬದುಕುಳಿಯಿತು.

ಬಿಜೆಪಿ ಆಳ್ವಿಕೆಯಲ್ಲಿ ಕಳೆದ ಹಲವು ವರ್ಷಗಳಿಂದ ಇದೇ ರೀತಿಯ ಘಟನೆಗಳಿಂದ ಪ್ರಸಕ್ತ ರಾಜಕೀಯ ವಾತಾವರಣವು ಹದಗೆಟ್ಟಿದ್ದು, ಇಲ್ಲಿ ಬಿಜೆಪಿಯನ್ನು ಆರೆಸ್ಸೆಸ್ ಪರದೆಯ ಹಿಂದೆ ನಿಯಂತ್ರಿಸುತ್ತಿದೆ. “ವಿಪಕ್ಷ್ ಮುಕ್ತ್” (ವಿಪಕ್ಷ ಮುಕ್ತ) ಭಾರತವೇ ನಮ್ಮ ಗುರಿ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ ಮಾತ್ರವಲ್ಲದೇ, ಸರ್ವಾಧಿಕಾರಕ್ಕೂ ಹೇತುವಾಗಲಿದೆ. ಆಡಳಿತ ಪಕ್ಷವು ಅಸಮಹಮತಿಯ ಧ್ವನಿಗಳನ್ನು ನಿರ್ಲಕ್ಷಿಸುತ್ತಾ ಕೃಷಿ ಮಸೂದೆಗಳು, ತ್ರಿವಳಿ ತಲಾಖ್ ಮಸೂದೆ ಮತ್ತು ಹೊಸ ಶಿಕ್ಷಣ ನೀತಿಯಂತಹ ವಿವಿಧ ಮಸೂದೆಗಳನ್ನು ಉಭಯ ಸದನಗಳಲ್ಲಿ ಅಂಗೀಕರಿಸಿತು. ಸಿಎಎಯಂತಹ ಮಸೂದೆಗಳು ಸಂವಿಧಾನದ ಸ್ಫೂರ್ತಿಗೆ ವಿರುದ್ಧವಾಗಿದ್ದು, ಇದರ ಕುರಿತಾದ ಅರ್ಜಿ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಯಲ್ಲಿದ್ದ ಹೊರತಾಗಿಯೂ ಇದು ಅನುಷ್ಠಾನದ ಹಂತದಲ್ಲಿದೆ. ಇದರ ವಿರುದ್ಧ ಪ್ರತಿಭಟಿಸಿದ ವಿದ್ಯಾರ್ಥಿಗಳನ್ನು ಕರಾಳ ಯುಎಪಿಎ ಮತ್ತು ದೇಶದ್ರೋಹದ ಅಡಿಯಲ್ಲಿ ವ್ಯಾಪಕವಾಗಿ ಬಂಧಿಸಲಾಯಿತು. ಸರ್ಕಾರದ ನೀತಿಗಳನ್ನು ಟೀಕಿಸುವ ಶಿಕ್ಷಣ ತಜ್ಞರು ಮತ್ತು ಅತ್ಯಂತ ಹಿಂದುಳಿದ ವರ್ಗಗಳಿಗಾಗಿ ಕೆಲಸ ಮಾಡುವ ಹೋರಾಟಗಾರರನ್ನು ಜೈಲಿಗೆ ಅಟ್ಟಲಾಗಿದೆ. ಸರ್ಕಾರದ ವೈಫಲ್ಯಗಳ ಬಗ್ಗೆ ಮೌನವಾಗಿರಲು ಸರ್ಕಾರವು ಮಾಧ್ಯಮದ ಒಂದು ವರ್ಗವನ್ನು ಖರೀದಿಸಿದೆ ಅಥವಾ ಅದನ್ನು ಭೀತಿಗೊಳಪಡಿಸಿದೆ. ಇತ್ತೀಚಿನ ತೀರ್ಪುಗಳು ಮತ್ತು ಹಸ್ತಕ್ಷೇಪ ಮಾಡದಿರುವುದು ನ್ಯಾಯಾಂಗವು ಕೂಡಾ ಸರ್ವಾಧಿಕಾರಿ ಆಡಳಿತದ ಹಿಡಿತದಿಂದ ಮುಕ್ತವಾಗಿಲ್ಲ ಎಂಬುದನ್ನು ಸಾಬೀತುಪಡಿಸಿವೆ. ಅಘೋಷಿತ ತುರ್ತುಸ್ಥಿತಿ, ಅಸಂವಿಧಾನಿಕತೆ ಮತ್ತು ಹಿಂದುತ್ವ ಫ್ಯಾಶಿಸಂನ ಸೂಚನೆಗಳು ಪ್ರಸ್ತುತ ಭಾರತದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿವೆ.

Also Read  ಅತ್ಯಾಚಾರ ಪ್ರಕರಣ- ಪ್ರಜ್ವಲ್‌ ರೇವಣ್ಣ ಜಾಮೀನು ಅರ್ಜಿ ವಜಾ

ಕಾಳಜಿ ಹೊಂದಿರುವ ಒಂದು ವಿದ್ಯಾರ್ಥಿ ಸಂಘಟನೆಯಾಗಿ ನಮಗೆ ಸರ್ವಾಧಿಕಾರದೊಂದಿಗೆ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ವಿದ್ಯಾರ್ಥಿ ಹೋರಾಟ ಮಾತ್ರವೇ ನಮ್ಮ ದೇಶ ಮತ್ತು ಸಂವಿಧಾನವನ್ನು ಹಿಂದುತ್ವ ದಾಳಿಯಿಂದ ರಕ್ಷಿಸಬಲ್ಲದು ಎಂಬುದಕ್ಕೆ ಭಾರತೀಯ ಇತಿಹಾಸವು ಸಾಕ್ಷಿಯಾಗಿದೆ. ಆದುದರಿಂದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾವು ಸಂವಿಧಾನವನ್ನು ಉಳಿಸಲು ಮತ್ತು ದೇಶದ ರಕ್ಷಣೆಗಾಗಿ ಅಭಿಯಾನವನ್ನು ನಡೆಸಲಿದೆ. ಆರೆಸ್ಸೆಸ್ ಫ್ಯಾಶಿಸಂ, ದೇಶದ ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಸಂರಚನೆಗೆ ನೈಜ ಬೆದರಿಕೆಯಾಗಿದೆ. ಇದು 1975ರ ತುರ್ತು ಪರಿಸ್ಥಿತಿಯ 46ನೇ ವರ್ಷಾಚರಣೆಯಲ್ಲಿ “ಅಘೋಷಿತ ತುರ್ತು ಪರಿಸ್ಥಿತಿ, ವಿದ್ಯಾರ್ಥಿಗಳ ಸ್ವಾತಂತ್ರ್ಯ, ಭ್ರಾತೃತ್ವ ಮತ್ತು ಸಮಾನತೆ” ಎಂಬ ಧ್ಯೇಯ ವಾಕ್ಯದೊಂದಿಗೆ ಜೂನ್ 25ರಿಂದ ಜುಲೈ 02ರ ವರೆಗೆ ನಡೆಯಲಿದೆ. ಈ ಅಭಿಯಾನದ ಅವಧಿಯಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಯುವ ಚರ್ಚಾಕೂಟ, ಹಕ್ಕುಗಳ ಕುರಿತಾದ ಚರ್ಚಾಕೂಟಗಳು, ಸಿಎಎ ವಿರೋಧಿ ಪ್ರತಿಭಟನಕಾರರ ಸ್ನೇಹಕೂಟ ಮತ್ತು ಸೌಹಾರ್ದ ಕೂಟಗಳು ಸೇರಿದಂತೆ ರಾಷ್ಟ್ರವ್ಯಾಪಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ. ಈ ಸಾಂವಿಧಾನಿಕ ಜವಾಬ್ದಾರಿಯ ನಿರ್ವಹಣೆಗಾಗಿ ನಾವು ನಿಮ್ಮ ಬೆಂಬಲ ಮತ್ತು ಸಹಕಾರವನ್ನು ಕೋರುತ್ತಿದ್ದೇವೆ.

Also Read  ಧಾರ್ಮಿಕ ಕ್ಷೇತ್ರ ಕಲ್ಲುಗುಂಡಿ ಚರ್ಚ್ ಗೆ ಟಿ.ಎಂ.ಶಹೀದ್ ಭೇಟಿ

 

ಈ ಸಂದರ್ಭದಲ್ಲಿ ಅಶ್ವಾನ ಸಾದಿಕ್ ಪಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸ್ವದಾಖತ್ ಶಾ, ರಾಷ್ಟ್ರೀಯ ಕಾರ್ಯದರ್ಶಿ, ಅನೀಸ್ ಕುಂಬ್ರ, ರಾಜ್ಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ, ಝುಬೇರ್ ಬೆಂಗಳೂರು, ರಾಜ್ಯ ಸಮಿತಿ ಸದಸ್ಯರು, ಕರ್ನಾಟಕ ಮೊದಲಾದವರು ಉಪಸ್ಥಿತರಿದ್ದರು.

error: Content is protected !!
Scroll to Top