(ನ್ಯೂಸ್ ಕಡಬ) Newskadaba.com ಹರಿಯಾಣ, ಜೂ. 22. ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ನಾಲ್ವರು ಯುವತಿಯರನ್ನು ರಕ್ಷಿಸಿ ಇಬ್ಬರು ಯುವಕರನ್ನು ಬಂಧಿಸಿದ ಘಟನೆ ನಡೆದಿದೆ.
ಸ್ಪಾ ಕೇಂದ್ರವೊಂದನ್ನು ಹೋಮ್ ಗಾರ್ಡ್ ಓರ್ವರು ನಡೆಸುತ್ತಿದ್ದ, ಅಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ದಾಳಿ ಸಂದರ್ಭದಲ್ಲಿ ಹೋಂ ಗಾರ್ಡ್ ಅಧಿಕಾರಿಯ ಕಾರಿನಲ್ಲಿದ್ದ ಸಮವಸ್ತ್ರವನ್ನು ಸ್ಥಳದಿಂದ ವಶಪಡಿಸಿಕೊಂಡಿದ್ದಾರೆ.