ಹದಗೆಟ್ಟಿದ್ದ ಹೊಸ್ಮಠ, ದೇರಾಜೆ, ಪನ್ಯಾಡಿ ರಸ್ತೆ ➤ ಕಡಬ ತಾಲೂಕು ಡಿಕೆಶಿ ಅಭಿಮಾನಿ ಬಳಗದಿಂದ ಶ್ರಮದಾನ

(ನ್ಯೂಸ್ ಕಡಬ) newskadaba.com ಕಡಬ, ಜೂ.21. ಡಿಕೆಶಿ ಅಭಿಮಾನಿ ಬಳಗ ಕಡಬ ತಾಲೂಕು ಇದರ ವತಿಯಿಂದ ಹೊಸಮಠ-ದೇರಾಜೆ-ಪನ್ಯಾಡಿ ರಸ್ತೆಯನ್ನು ಶ್ರಮದಾನದ ಮೂಲಕ ದುರಸ್ತಿಗೊಳಿಸಲಾಯಿತು.

ಕಳೆದ 40 ವರುಷಗಳಿಂದ ಹದಗೆಟ್ಟಿದ್ದ ಈ ರಸ್ತೆಯು ಹೊಂಡಗಳಿಂದ ತುಂಬಿದ್ದು ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು. ಈ ವಿಚಾರವನ್ನು ಮನಗೊಂಡು ಡಿಕೆಶಿ ಅಭಿಮಾನಿಗಳ ಬಳಗದ ವತಿಯಿಂದ ರಸ್ತೆಗಳ ಹೊಂಡಗಳನ್ನು ಮುಚ್ಚುವ ಕೆಲಸ ಹಾಗೂ ರಸ್ತೆಯ ಇಕ್ಕೆಲಗಳಲ್ಲಿದ್ದ ಕಸ ಕಡ್ಡಿಗಳನ್ನು ಯಂತ್ರದ ಮೂಲಕ ಸ್ವಚ್ಛಗೊಳಿಸುವ ಮೂಲಕ ಶ್ರಮದಾನ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಡಿಕೆಶಿ ಅಭಿಮಾನಿ ಬಳಗದ ಅಧ್ಯಕ್ಷರಾದ ಪೈಝಲ್ ಎಸ್ಇಎಸ್ ರವರು ಚಾಲನೆಯನ್ನು ನೀಡಿದರು. ಈ ಕಾರ್ಯಕ್ರಮಕ್ಕೆ ಡಿಕೆಶಿ ಅಭಿಮಾನಿ ಬಳಗದ ಗೌರವ ಅಧ್ಯಕ್ಷರಾದ ಫಝಲ್ ಕೋಡಿಂಬಾಳ, ಸಂಚಾಲಕರಾದ ಸುಧೀರ್ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಮನೋಜ್ ಬಳ್ಳೇರಿ, ಕೋಶಾಧಿಕಾರಿ ಶಾಕೀರ್ ಪಿಲ್ಯ, ಕಾರ್ಯದರ್ಶಿ ಆನಂದ್ ಕಜೆ ಹಾಗೂ ಸದಸ್ಯರಾದ ಕೇಶವ ಸಂಪಡ್ಕ, ಅವೀನ್ ಪಲ್ಲತ್ತಡ್ಕ, ಇಕ್ಬಾಲ್, ಕರೀಂ ಕೆಕೆ, ಧನಂಜಯ, ದಾಸಪ್ಪ, ದಿನೇಶ್, ಪ್ರಸಾದ್, ಕೃಷ್ಣಪ್ಪ, ಕಾರ್ತಿಕ್, ಮಹೇಶ್, ಅನಿಲ್, ಸುನಿಲ್, ತುಕರಾಮ, ಚರಣ್, ಅನ್ಸಾರ್, ರಫೀಕ್, ಜಬ್ಬಾರ್ ಕಳಾರ, ಅಜ್ಮಲ್, ಇಸ್ಮಾಯಿಲ್, ಪುತ್ತು ಕಳಾರ, ರಂಜಿತ್, ನಿಝಾಮ್ ಕಡಬ, ರಫೀಕ್ ವಾಚ್, ನೌಶಾದ್ ಮೊದಲಾದವರು ಉಪಸ್ತಿತರಿದ್ದರು.

Also Read  ವಿಶ್ವ ಪ್ರಸಿದ್ಧ ತ್ರಾಸಿ-ಮರವಂತೆ ಬೀಚ್‌ನಲ್ಲಿ ಸ್ಕೈ ಡೈನಿಂಗ್ ಆರಂಭ

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಮಹಮ್ಮದ್ ಆಲಿ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ತನಿಯಪ್ಪ, ಶೀನಪ್ಪ ದೇರಾಜೆ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಗಂಗಾಧರ ಗೌಡ ಶ್ರಮದಾನ ಮಾಡುವ ಮೂಲಕ ಯುವಕರಿಗೆ ಪ್ರೇರಣೆಯಾದರು. ಈ ಸಂದರ್ಭದಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್‌ ಅದ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ , ಮುಖಂಡರಾದ ಪಿಪಿ ವರ್ಗೀಸ್, ಸರ್ವೋತ್ತಮ ಗೌಡ ಹಾಗೂ ಕೃಷ್ಣಪ್ಪ ಜಿ. ಆಗಮಿಸಿ ಶುಭ ಕೋರಿದರು.

Also Read  ?? ಮಂಗಳೂರು: ಕಾಂಗ್ರೆಸ್ ಹಿರಿಯ ಮುಖಂಡರ ಪುತ್ರನ ಮನೆಗೆ ನುಗ್ಗಿದ ಕಳ್ಳರು ➤ ಸುಮಾರು 75 ಪವನ್ ಹಾಗೂ ಐದು ಲಕ್ಷ ರೂ ನಗದು ಕಳವು

 

 

 

 

error: Content is protected !!
Scroll to Top