(ನ್ಯೂಸ್ ಕಡಬ) Newskadaba.com ಕೇರಳ, ಜೂ. 21. ಕಾರು ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ 5 ಮಂದಿ ದಾರುಣವಾಗಿ ಮೃತಪಟ್ಟ ಘಟನೆ ಕೇರಳದ ಕಲ್ಲಿಕೋಟೆಯ ರಾಮನಟ್ಟುಕಾರ ಸಮೀಪ ವೈದ್ಯಾರಂಗಡಿ ಬಳಿಯಲ್ಲಿ ನಡೆದಿದೆ.

ಮೃತಪಟ್ಟವರನ್ನು ಪಾಲಕ್ಕಾಡ್ ನ ಚೆರ್ಪುಲ್ಲಸಿರಿ ನಿವಾಸಿಗಳಾದ ನಾಸರ್, ಜುಬೈರ್, ಮುಹಮ್ಮದ್ ಸಾಹೀರ್, ಹಸೈನಾರ್ ಹಾಗೂ ತಾಹಿರ್ ಎಂದು ಗುರುತಿಸಲಾಗಿದೆ. ಈ ಐದೂ ಮಂದಿಯು ಮಹಿಂದ್ರಾ ಬೊಲೆರೋ ವಾಹನದಲ್ಲಿ ಕರಿಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಈ ಕುರಿತು ಫೆರೋಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಮಣಿಪಾಲ :ಆರ್ಥಿಕ ಸಮಸ್ಯೆಯಿಂದ ಆತ್ಯಹತ್ಯೆಗೆ ಶರಣಾದ ಟ್ಯಾಕ್ಸಿ ಚಾಲಕ

error: Content is protected !!
Scroll to Top