ರಾಜ್ಯದಲ್ಲಿ ಲಾಕ್‍ಡೌನ್ ಮತ್ತೆ ಮುಂದುವರಿಕೆ..? ➤ ಇಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.19. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಜೂ.21 ರ ವರೆಗೆ ಲಾಕ್‍ಡೌನ್ ಜಾರಿಯಲ್ಲಿದ್ದು, ಜೂನ್ ಅಂತ್ಯದವರೆಗೆ ಮುಂದುವರಿಯುವ ಲಕ್ಷಣಗಳು ಗೋಚರಿಸುತ್ತಿದೆ.

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೊರೋನಾ ಎರಡನೇ ಅಲೆಯ ತೀವ್ರತೆ ಇನ್ನೂ ಹೆಚ್ಚಳವಾಗುತ್ತಿರುವುದು ಆತಂಕದಿಂದ ಕಾರಣವಾಗಿದೆ. ಈ ಬಗ್ಗೆ ಇಂದು ಸಂಜೆ ತನ್ನ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಸಭೆ ಕರೆದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಲಾಕ್‍ಡೌನ್ ಮುಂದುವರಿಸಬೇಕೋ ಅಥವಾ ಅನ್ ಲಾಕ್ ಮಾಡಬೇಕೋ ಎಂಬ ಬಗ್ಗೆ ತಜ್ಞರ ಜೊತೆ ಚರ್ಚಿಸಲಿದ್ದಾರೆ. ಲಾಕ್‍ಡೌನ್ ಬಗ್ಗೆ ಅಧಿಕೃತ ಆದೇಶ ಇಂದು ಸಂಜೆ ವೇಳೆಗೆ ಹೊರಬೀಳಲಿದೆ.

Also Read  ಮಹಿಳೆಗೆ ಹಲ್ಲೆಗೈದು ಸರ ಅಪಹರಣ

 

 

bs

error: Content is protected !!
Scroll to Top