ಅಜಿತ್ ಶೆಟ್ಟಿ ಕಡಬರವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ➤ ನ್ಯೂಸ್ ಕಡಬದ ಫೇಸ್‌ಬುಕ್‌ ಖಾತೆಗೆ ಹಣದ ಬೇಡಿಕೆಯಿಟ್ಟ ಭೂಪ

(ನ್ಯೂಸ್ ಕಡಬ) newskadaba.com ಕಡಬ, ಜೂ.18. ಇಲ್ಲಿನ ಯುವ ಉದ್ಯಮಿ, ಗಣೇಶ್ ಮೆಡಿಕಲ್ ಮಾಲಕ ಅಜಿತ್ ಶೆಟ್ಟಿಯವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದು ಹಣಕ್ಕಾಗಿ ಬೇಡಿಕೆ ಇಡುತ್ತಿರುವ ಘಟನೆ ಗುರುವಾರದಿಂದ ನಡೆಯುತ್ತಿದೆ.

ಅಜಿತ್ ಶೆಟ್ಟಿಯವರ ಹೆಸರಿನಲ್ಲಿ ನಕಲಿ ಖಾತೆ ತೆರೆದು ಫ್ರೆಂಡ್ ರಿಕ್ವೆಸ್ಟ್ ಕಳುಹಿಸುವುದಲ್ಲದೇ ಸ್ವಲ್ಪ ಹಣ ಅಗತ್ಯವಿದ್ದು, ನಾಳೆ ಬೆಳಿಗ್ಗೆಯೇ ಹಿಂತಿರುಗಿಸುವುದಾಗಿ ಮೆಸೇಜ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಅಲ್ಲದೇ ನ್ಯೂಸ್ ಕಡಬದ ಫೇಸ್‌ಬುಕ್‌ ಖಾತೆಗೆ ಮೆಸೇಜ್ ಮಾಡಿರುವ ದುಷ್ಕರ್ಮಿಗಳು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಅಜಿತ್ ಶೆಟ್ಟಿಯವರು ಹೇಳಿಕೆ ನೀಡಿದ್ದು, ನನ್ನ ಹೆಸರಿನಲ್ಲಿ ಯಾರೋ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿ ಹಣ ಕಳುಹಿಸುವಂತೆ ಬೇಡಿಕೆ ಇಡುತ್ತಿದ್ದಾರೆ. ಈಗಾಗಲೇ ನನ್ನ ಹಲವು ಮಿತ್ರರು ಕರೆ ಮಾಡಿ ಮಾಹಿತಿ ನೀಡಿದ್ದು, ದಯವಿಟ್ಟು ಯಾರೂ ಹಣ ಕಳುಹಿಸದಿರಿ ಎಂದು ಕೋರಿದ್ದಾರೆ.

Also Read  ಜಾತಕದಲ್ಲಿ ದೈವ ಬಲದಿಂದ ಲಗ್ನ ಬಲ ಚೆನ್ನಾಗಿದ್ದರೆ ನಿಮ್ಮ ಜೀವನ ಸುಂದರವಾಗಿರುತ್ತದೆ

 

 

 

error: Content is protected !!
Scroll to Top