ಮುಂದಿನ ಎರಡರಿಂದ ಮೂರು ವಾರಗಳಲ್ಲಿ ಕೊರೋನಾ ಮೂರನೇ ಅಲೆ…! ➤ ತಜ್ಞರ ಎಚ್ಚರಿಕೆ

(ನ್ಯೂಸ್ ಕಡಬ) Newskadaba.com ಮುಂಬೈ, ಜೂ. 18. ಕೊರೋನಾ ಸೋಂಕಿನ ಎರಡನೇ ಅಲೆಯು ಸ್ವಲ್ಪ ಕಡಿಮೆಯಾಗುತ್ತಿದ್ದಂತೆಯೇ ಇದೀಗ ಮುಂದಿನ ಎರಡರಿಂದ ನಾಲ್ಕು ವಾರಗಳಲ್ಲಿ ಕೊರೋನಾ ಮೂರನೇ ಅಲೆ ಆರಂಭವಾಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ದೇಶದಲ್ಲಿ ಕೊರೋನಾ ಮೊದಲ ಅಲೆಗಿಂತ ಎರಡನೇ ಅಲೆ ಅತೀ ಹೆಚ್ಚು ಗಂಭೀರತರದ ಮರಣ ಮೃದಂಗವನ್ನೇ ಬಾರಿಸಿತ್ತು. ಅಲ್ಲದೇ ಅಕ್ಟೋಬರ್ ತಿಂಗಳಿನಲ್ಲಿ ಮೂರನೇ ಅಲೆ ಆರಂಭವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರೂ ಇದೀಗ ಎರಡರಿಂದ ನಾಲ್ಕು ವಾರಗಳಲ್ಲಿ ಅಪ್ಪಳಿಸಲಿದೆ ಎಂದು ಎಚ್ಚರಿಸಿದ್ದಾರೆ. ಕೊರೋನಾದಿಂದ ತತ್ತರಿಸಿ ಹೋಗಿದ್ದ ಮಹಾರಾಷ್ಟ್ರದಲ್ಲಿ ಸೋಂಕಿನ ಪ್ರಮಾಣ ಇಳಿಕೆಯಾದ ಪರಿಣಾಮ ಐದನೇ ಹಂತದ ಅನ್ ಲಾಕ್ ಜಾರಿ ಮಾಡಲಾಗಿದೆ. ಆದರೆ ಕೊರೋನಾ ನಿಯಮಗಳನ್ನು ಪಾಲಿಸದೇ ಇದ್ದಲ್ಲಿ ಮೂರನೇ ಅಲೆ ಬೇಗನೆ ಬರುವ ಸಾಧ್ಯತೆ ಹೆಚ್ಚಿದೆ. ಎರಡನೇ ಅಲೆಗಿಂತ ವೇಗವಾಗಿ ಮೂರನೇ ಅಲೆ ಹರಡುವ ಸಾಧ್ಯತೆಯಿರುವುದರಿಂದ ಹೆಚ್ಚು ಜನರನ್ನು ಹೆಮ್ಮಾರಿ ವೈರಸ್ ಕಾಡುವ ಸಾಧ್ಯತೆಯಿದೆ ಎಂದು ಮಹಾರಾಷ್ಟ್ರ ಕೋವಿಡ್ ಪಡೆ ರಾಜ್ಯ ಸರಕಾರಕ್ಕೆ ತಿಳಿಸಿದೆ. ಅಲ್ಲದೇ ವಿದೇಶಿ ರಾಷ್ಟ್ರಗಳಲ್ಲಿ ಎರಡನೇ ಅಲೆ ಕಡಿಮೆಯಾದ ಬೆನ್ನಲ್ಲೇ ಎರಡರಿಂದ ಮೂರು ವಾರಗಳಲ್ಲಿ ಮೂರನೇ ಅಲೆ ಕಾಣಿಸಿಕೊಂಡಿದ್ದು, ಇದೀಗ ದೇಶದಲ್ಲೂ ಅದೇ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಕಾರ್ಯಪಡೆ ಸದಸ್ಯ ಡಾ.ಶಶಾಂಕ್ ಜೋಷಿ ತಿಳಿಸಿದ್ದಾರೆ.

Also Read  ಇಂದು ಶತಮಾನದ ಸುದೀರ್ಘ ಚಂದ್ರಗ್ರಹಣ ► ಕೆಂಪಗಿನ ರಕ್ತ ಚಂದಿರನ ವಿಶೇಷತೆ ಗೊತ್ತೇ..?

error: Content is protected !!
Scroll to Top