ಉಪ್ಪಿನಂಗಡಿ: ಚಲಿಸುತ್ತಿದ್ದ ರಿಕ್ಷಾದ ಮೇಲೆ ಉರುಳಿಬಿದ್ದ ಬೃಹತ್ ಮರ ➤ ಮಹಿಳೆಗೆ ಗಂಭೀರ ಗಾಯ

(ನ್ಯೂಸ್ ಕಡಬ) Newskadaba.com ಉಪ್ಪಿನಂಗಡಿ, ಜೂ. 17. ಚಲಿಸುತ್ತಿದ್ದ ಅಟೋರಿಕ್ಷಾದ ಮೇಲೆ ಮರವೊಂದು ಉರುಳಿಬಿದ್ದ ಪರಿಣಾಮ ಮಕ್ಕಳು ಸೇರಿದಂತೆ ನಾಲ್ವರು ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ ಸಮೀಪ ನೇಜಿಕಾರು ಎಂಬಲ್ಲಿ ನಡೆದಿದೆ.


ಉಪ್ಪಿನಂಗಡಿ- ಬೆಳ್ತಂಗಡಿ ರಸ್ತೆಯ ಕಲ್ಲೇರಿ ನೇಜಿಕಾರು ಎಂಬಲ್ಲಿ ಅಟೋರಿಕ್ಷಾ ಚಲಿಸುತಿದ್ದ ವೇಳೆ ಭಾರೀ ಗಾಳಿಮಳೆಯ ಪರಿಣಾಮ ಬೃಹತ್ ಮರವೊಂದು ಉರುಳಿ ಬಿದ್ದಿದೆ. ಘಟನೆಯಲ್ಲಿ ರಿಕ್ಷಾದಲ್ಲಿ ತಾಯಿ-ಮಗು, ಇನ್ನೋರ್ವ ಪ್ರಯಾಣಿಕ ಹಾಗೂ ಆಟೋ ಚಾಲಕನಿಗೆ ಗಾಯಗಳಾಗಿವೆ ಎನ್ನಲಾಗಿದೆ. ರಿಕ್ಷಾದಲ್ಲಿದ್ದ ಮಹಿಳೆಯ ತಲೆಗೆ ಗಂಭೀರ ಗಾಯವಾಗಿದ್ದು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

Also Read  'SBI' ಗ್ರಾಹಕರಿಗೆ ಬಿಗ್ ಶಾಕ್..!! ➤ ಖಾತೆಯಿಂದ 'ಹಣ' ಕಟ್…

error: Content is protected !!
Scroll to Top