ಮಂಗಳೂರಿನಲ್ಲಿ ಅಪ್ಪನಿಂದಲೇ ಪುತ್ರಿಯರ ಮೇಲೆ ನಿರಂತರ ಅತ್ಯಾಚಾರ

(ನ್ಯೂಸ್ ಕಡಬ) newskadaba,ಮಂಗಳೂರು ಜೂ.17: ತನ್ನಿಬ್ಬರು ಅಪ್ರಾಪ್ತ ಪುತ್ರಿಯರ ಮೇಲೆ ಅತ್ಯಾಚಾರವೆಸಗುತ್ತಿದ್ದ ಕಾಮುಕ ತಂದೆಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಸುರತ್ಕಲ್​ ನಿವಾಸಿ ಈ ಕೃತ್ಯವೆಸಗಿದವನು. ಈತ ತನ್ನ 17 ಮತ್ತು 18 ವರ್ಷದ ಇಬ್ಬರು ಪುತ್ರಿಯರ ಮೇಲೆ ಕಳೆದ ಒಂದೂವರೆ ವರ್ಷದಿಂದ ಅತ್ಯಾಚಾರವೆಸಗಿದ್ದಾನೆ ಎಂದು ತಿಳಿದುಬಂದಿದೆ.

ಮನೆಯಲ್ಲಿ ಪತ್ನಿ ಇಲ್ಲದ ಸಂದರ್ಭದಲ್ಲಿ ಆರೋಪಿ ಈ ಹೇಯ ಕೃತ್ಯ ಎಸಗಿದ್ದಾನೆ.ಇತ್ತೀಚೆಗೆ ಈ ಸಹೋದರಿಯರು ತಾಯಿ ಜೊತೆಗೆ ಮಾವನ ಮನೆಗೆ ತೆರಳಿದಾಗ ಅಲ್ಲಿ ಈ ವಿಷಯ ತಿಳಿಸಿದ್ದಾರೆ.ವಿಷಯ ತಿಳಿದ ಬಳಿಕ ಬಾಲಕಿಯರ ಮಾವನ ಕಡೆಯವರು ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೋಕ್ಸೋ ಪ್ರಕರಣ ದಾಖಲಿಸಿಕೊಂಡ ಮಂಗಳೂರು ಮಹಿಳಾ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Also Read  ಪುತ್ತೂರು: ಟಿಪ್ಪರ್ ಹಾಗೂ ಸಿಹಿತಿಂಡಿ ಸಾಗಾಟದ ಓಮ್ನಿ ನಡುವೆ ಢಿಕ್ಕಿ ➤ ಪ್ರಯಾಣಿಕರು ಅಪಾಯದಿಂದ ಪಾರು

error: Content is protected !!
Scroll to Top