ತೈಲ ಬೆಲೆಯೇರಿಕೆ ವಿರೋಧಿಸಿ ಎಸ್ಡಿಪಿಐ ವತಿಯಿಂದ ಬೆಳ್ತಂಗಡಿಯಾದ್ಯಂತ ಪ್ರತಿಭಟನೆ

(ನ್ಯೂಸ್ ಕಡಬ) Newskadaba.com ಬೆಳ್ತಂಗಡಿ, ಜೂ. 17. ದಿನದಿಂದ ದಿನಕ್ಕೆ ಇಂಧನ ತೈಲ ಬೆಲೆಯೇರಿಕೆಯಾಗಿ ಇದೀಗ ಪೆಟ್ರೋಲ್ ಬೆಲೆ 100ರ ಗಡಿ ದಾಟಿರುವುದನ್ನು ವಿರೋಧಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ವತಿಯಿಂದ ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ, ಕಲ್ಲೇರಿ, ಮದ್ದಡ್ಕ, ಕೊಕ್ಕಡ, ಕುಪ್ಪೆಟ್ಟಿ ಮುಂತಾದ ನಗರಗಳಲ್ಲಿ ಪ್ರತಿಭಟನೆ ನಡೆಸಲಾಯಿತು.

ಕೇಂದ್ರ ಸರಕಾರದ ವಿರುದ್ಧ ಪೆಟ್ರೋಲ್ ಬಂಕ್ ಗಳ ಎದುರು ವಾಹನಗಳಿಗೆ ಹಗ್ಗ ಕಟ್ಟಿ ಎಳೆದು, ಸೈಕಲ್ ತುಳಿದು, ಭಿತ್ತಿ ಪತ್ರ ಪ್ರದರ್ಶಿಸಿ, ಘೋಷಣೆ ಕೂಗಿ ವಿಭಿನ್ನ ಶೈಲಿಯಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ವಿವಿದ ಕಡೆಗಳಲ್ಲಿ ನಡೆದ ಈ ಪ್ರತಿಭಟನೆಗಳಲ್ಲಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಹನೀಫ್ ಪುಂಜಾಲಕಟ್ಟೆ, ನಿಸಾರ್ ಕುದ್ರಡ್ಕ, ಫೈಝಲ್ ಮೂರುಗೋಳಿ, ರಿಯಾಜ್ ಕುವೆಟ್ಟು, ಎಸ್.ಡಿ.ಪಿ.ಐ. ಬೆಳ್ತಂಗಡಿ ವಿಧಾನಸಭಾ ಸಮಿತಿಯ ಉಪಾಧ್ಯಕ್ಷ ಶುಕೂರ್ ಕುಪ್ಪೆಟ್ಟಿ, ಸದಸ್ಯರಾದ ಅಶ್ಫಾಕ್ ಪುಂಜಾಲಕಟ್ಟೆ, ಸಾಲಿ ಮದ್ದಡ್ಕ, ಮಜೀದ್ ಪುಂಜಾಲಕಟ್ಟೆ, ನವಾಜ್ ಕುದ್ರಡ್ಕ, ಅಝೀಜ್, ಆಸೀಫ್ ಕೊಕ್ಕಡ ಮುಂತಾದವರು ಉಪಸ್ಥಿತರಿದ್ದರು.

Also Read  'ಸೋಲಿನ ಹತಾಶೆಯಿಂದ ಕಾಂಗ್ರೆಸ್ ನಾಯಕರು ನನ್ನ ವಿರುದ್ಧ ಆರೋಪಕ್ಕೆ ಮುಂದಾಗಿದ್ದಾರೆ' ➤ ಸಿಎಂ ಬಸವರಾಜ ಬೊಮ್ಮಾಯಿ

error: Content is protected !!
Scroll to Top