ಕಡಬ: ನಾಪತ್ತೆಯಾಗಿದ್ದ ಯುವಕ ಠಾಣೆಗೆ ಹಾಜರ್

(ನ್ಯೂಸ್ ಕಡಬ) newskadaba.com ಕಡಬ, ಜೂ.15. ಹದಿನೈದು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವರು ಮಂಗಳವಾರದಂದು ಪತ್ತೆಯಾಗಿದ್ದಾರೆ.

ಕಡಬ ತಾಲೂಕಿನ ಆಲಂಕಾರು ಗ್ರಾಮ ಪಜ್ಜಡ್ಕ ನಿವಾಸಿ ದಿ| ಶೇಷಪ್ಪ ಗೌಡ ಎಂಬವರ ಪುತ್ರ ಗಣೇಶ್ ಪ್ರಸಾದ್ (34) ಎಂಬವರು ಮೇ.28 ರಂದು ಯಾರಿಗೂ ಹೇಳದೆ ಮನೆಯಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಅವರ ಸಹೋದರ ನೀಡಿದ ದೂರಿ‌ನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೆಲಸದ ನಿಮಿತ್ತ ಮಂಗಳೂರಿಗೆ ತೆರಳಿದ್ದ ಇವರು ಸೋಮವಾರದಂದು ತನ್ನ ಮನೆಯವರೊಂದಿಗೆ ಠಾಣೆಗೆ ಆಗಮಿಸಿ ಹೇಳಿಕೆ ನೀಡಿದ್ದಾರೆ.

Also Read  ಬಂಟ್ವಾಳ: ಕಾರಿಂಜೇಶ್ವರ ದೇವಸ್ಥಾನ ಅಪವಿತ್ರಗೊಳಿಸಿದ ಪ್ರಕರಣ ➤ ನಾಲ್ವರ ಬಂಧನ

 

 

 

error: Content is protected !!
Scroll to Top