ಸರಳಿಕಟ್ಟೆ: “ಸಹಾಯ್” ಎಸ್ಸೆಸ್ಸೆಫ್ ಸೆಕ್ಟರ್ ವತಿಯಿಂದ ಸ್ಯಾನಿಟೈಸರ್ ಸಿಂಪಡಣೆ ಹಾಗೂ ಉಚಿತ ಸಸಿ ವಿತರಣೆ

(ನ್ಯೂಸ್ ಕಡಬ) Newskadaba.com ತೆಕ್ಕಾರು, ಜೂ. 15. “ಸಹಾಯ್” ಎಸ್ಸೆಸ್ಸೆಫ್ ಸರಳಿಕಟ್ಟೆ ಸೆಕ್ಟರ್ ವತಿಯಿಂದ ಕೊರೋನಾ ಜನ ಜಾಗೃತಿ ಕಾರ್ಯಕ್ರಮ ಮತ್ತು ಸ್ಯಾನಿಟೈಸರ್ ಸಿಂಪಡಣೆ ಹಾಗು ಉಚಿತ ಸಸಿ ವಿತರಣೆ ಕಾರ್ಯಕ್ರಮವು ಸರಳಿಕಟ್ಟೆ ಸೆಕ್ಟರ್ ವ್ಯಾಪ್ತಿಯ 9 ಜಂಕ್ಷನ್ ಗಳಲ್ಲಿ ನಡೆಯಿತು.

ಬೆಳಿಗ್ಗೆ 7 ಗಂಟೆಗೆ ಮೂಡಡ್ಕದಿಂದ ಪ್ರಾರಂಭವಾದ ಕಾರ್ಯಕ್ರಮ ಸಂಜೆ 4 ಗಂಟೆಯವರೆಗೆ ಯಶಸ್ವಿಯಾಗಿ ನಡೆಯಿತು. ಬೀಸುವ ಮಳೆಯ ಮಧ್ಯೆ ಕಾರ್ಯಾಚರಣೆಗಿಳಿದ ‘ಸಹಾಯ್’ ತಂಡ ಕೊರೊನಾ ಸಂದಿಗ್ತ ಪರಿಸ್ಥಿತಿಯಲ್ಲಿ ಎಲ್ಲಾ ಜನರವೊಂದಿಗೆ ತಾವಿದ್ದೇವೆ ಎಂದು ಸಂದೇಶ ಸಾರಿದರು. ವಿವಿಧ ಮಸೀದಿ, ಮದ್ರಸ, ದೇವಸ್ಥಾನ, ಮಂದಿರ, ಶಾಲೆ, ಅಂಗನವಾಡಿ ಹಾಗೂ ಸರಕಾರಿ ಕಚೇರಿಗಳಿಗೆ ಸ್ಯಾನಿಟೈಸರ್ ಸಿಂಪಡಿಸಲಾಯಿತು. ಮತ್ತು ವಿವಿಧ ಕಡೆಗಳಲ್ಲಿ ಕೊರೊನಾ ಜನ ಜಾಗೃತಿ ನಡೆಸಿ ಜನರಿಗೆ ಕೋವಿಡ್ ನಿಯಮಗಳೊಂದಿಗೆ ಕರಪತ್ರ ಮತ್ತು ಉಚಿತ ಸಸಿ ವಿತರಿಸಲಾಯಿತು. ಸೆಕ್ಟರ್ ವ್ಯಾಪ್ತಿಯ ಸಹಾಯ್ ತಂಡ ಸಕ್ರಿಯವಾಗಿ ಕಾರ್ಯಚರಿಸಿತು.

Also Read  ಕಡಬ ಟೌನ್ ಜುಮಾ ಮಸೀದಿ ಮುದರ್ರಿಸ್‍ಗೆ ಸನ್ಮಾನ, ಬೀಳ್ಕೊಡುಗೆ

error: Content is protected !!
Scroll to Top