ಮರವೂರು ಸೇತುವೆಯಲ್ಲಿ ಬಿರುಕು ➤ ಬಜಪೆ ವಿಮಾನ ನಿಲ್ದಾಣ ಸಂಪರ್ಕ ಕಡಿತ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.15. ನಗರದ ಹೊರವಲಯದ ಮರವೂರು ಸೇತುವೆಯು ಬಿರುಕು ಬಿಟ್ಟಿದ್ದು, ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.

ಕಳೆದ ಮೂರು – ನಾಲ್ಕು ದಿನಗಳಿಂದ ವಿಪರೀತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸೇತುವೆಯ ಪಿಲ್ಲರ್ ವೊಂದು ಕುಸಿದಿದ್ದು, ಇದರಿಂದಾಗಿ ಮಂಗಳೂರು ನಗರದಿಂದ ಬಜಪೆ ವಿಮಾನ ನಿಲ್ದಾಣ ಸಂಪರ್ಕಿಸುವ ಪ್ರಮುಖ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸೇತುವೆ ಬಿರುಕು ಬಿಟ್ಟ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ಕಡೆಗೆ ತೆರಳುವ ಪ್ರಯಾಣಿಕರಿಗೆ ಕಾವೂರು, ಕೂಳೂರು ಮಾರ್ಗವಾಗಿ ಜೋಕಟ್ಟೆ ಸಂಪರ್ಕಿಸಿ ಬಜಪೆಗೆ ಅಥವಾ ಪಚ್ಚನಾಡಿ, ಗುರುಪುರ ಕೈಕಂಬ ಮಾರ್ಗವಾಗಿ ಬಜಪೆಗೆ ಬದಲಿ ವ್ಯವಸ್ಥೆ ಕಲ್ಪಿಸಲಾಗಿದೆ.

Also Read  ಕಾರ್ಕಳ: ಹೂಡಿಕೆ ಮಾಡಿದ 66,27,634ರೂ. ವಾಪಾಸ್ಸು ನೀಡದೆ ವಂಚನೆ; ಪ್ರಕರಣ ದಾಖಲು

 

 

 

error: Content is protected !!
Scroll to Top