ಅಪಘಾತದಿಂದಾಗಿ ಗಂಭೀರಾವಸ್ಥೆಯಲ್ಲಿರುವ ವಿಜಯ್ ಬದುಕುಳಿಯುವ ಸಾಧ್ಯತೆ ಇಲ್ಲ…! ➤ ಅಂಗಾಂಗ ದಾನಕ್ಕೆ ಸಿದ್ದತೆ- ಸಹೋದರ ಸಿದ್ದೇಶ್

(ನ್ಯೂಸ್ ಕಡಬ) Newskadaba.com ಬೆಂಗಳೂರು, ಜೂ. 14. ರಸ್ತೆ ಅಪಘಾತದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ಸಂಚಾರಿ ವಿಜಯ್ ಅವರು ಸಹಜ ಉಸಿರಾಟವನ್ನು ನಿಲ್ಲಿಸಿದ್ದು, ಅವರ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿದ್ದರಿಂದ ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಎಂದು ಅಪೋಲೋ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಇವರು ಸಹಜ ಉಸಿರಾಟವಿಲ್ಲದೆ ಸಂಪೂರ್ಣ ಕೃತಕ ಉಸಿರಾಟದಲ್ಲಿದ್ದು, ಮೆದುಳು ನಿಷ್ಕ್ರಿಯವಾಗಿ ಯಾವುದೇ ಚಿಕಿತ್ಸೆಗೆ ಅವರು ಸ್ಪಂದಿಸುತ್ತಿಲ್ಲ. ಇವರು ಇನ್ನು ಬದುಕುವ ಸಾಧ್ಯತೆ ತೀರಾ ಕಡಿಮೆಯಿದೆ. ಹೀಗಾಗಿ ಅಂಗಾಂಗ ದಾನಕ್ಕೆ ಚಿಂತನೆ ನಡೆಸಿದ್ದೇವೆ ಎಂದು ವಿಜಯ್ ಸಹೋದರ ಸಿದ್ದೇಶ್ ತಿಳಿಸಿದ್ದಾರೆ.

Also Read  ನವವಿವಾಹಿತರಿಗೆ ಗುಡ್ ನ್ಯೂಸ್- ಇನ್ಮುಂದೆ ಕುಳಿತಲ್ಲೇ ಪಡೆಯಬಹುದು ‘ವಿವಾಹ ನೋಂದಣಿ’

error: Content is protected !!
Scroll to Top