(ನ್ಯೂಸ್ ಕಡಬ) Newskadaba.com ನವದೆಹಲಿ, ಜೂ. 13. ದಿನದಿಂದ ದಿನಕ್ಕೆ ಕೊರೋನಾ ವೈರಸ್ ಸೋಂಕು ಹೆಚ್ಚುತ್ತಿದ್ದರೂ ಬಹುತೇಕ ಜನರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ ಕೊರೊನಾ ಲಸಿಕೆಯ ವಿಚಾರದಲ್ಲಿ ಅಪಪ್ರಚಾರವೂ ನಡೆಯುತ್ತಿದೆ. ಇದರ ನಡುವಲ್ಲೇ ಅಧಿಕಾರಿಯೋರ್ವರು ಕೊರೋನಾ ಲಸಿಕೆ ಹಾಕಿಸಿಕೊಂಡ್ರೆ 20 ಕೆ.ಜಿ. ಅಕ್ಕಿ ಉಚಿತವಾಗಿ ನೀಡುವ ಆಫರ್ ನೀಡಿದ್ದಾರೆ.
ಅರುಣಾಚಲ ಪ್ರದೇಶದಲ್ಲಿನ ಗ್ರಾಮೀಣ ಭಾಗದ ಜನರು ಕೊರೊನಾ ಲಸಿಕೆಗೆ ಹಿಂದೇಟು ಹಾಕುತ್ತಿದ್ದ ಸಂದರ್ಭದಲ್ಲಿ ಕಸರತ್ತು ನಡೆಸಿರುವ ಅರುಣಾಚಲದ ಸುಬನ್ಸರಿ ಜಿಲ್ಲೆಯ ಅಧಿಕಾರಿಯಾಗಿರುವ ಕಾಶಿವಾಂಗ್ ಚುಕ್ ಎಂಬವರು ತಾನು ಕಾರ್ಯ ನಿರ್ವಹಿಸುತ್ತಿರುವ ಪ್ರದೇಶದಲ್ಲಿ ಲಸಿಕೆ ಹಾಕಿಸಿಕೊಳ್ಳುವ ಜನರಿಗೆ 20 ಕೆ.ಜಿ. ಅಕ್ಕಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆ 1399 ಮಂದಿಯ ಪೈಕಿ 80ಕ್ಕೂ ಅಧಿಕ ಮಂದಿ ಲಸಿಕಾ ಕೇಂದ್ರದತ್ತ ಓಡೋಡಿ ಬಂದಿದ್ದಾರೆ. ಅಲ್ಲದೇ ಇತರರು ಕೂಡಾ ಅಕ್ಕಿಯ ಆಫರ್ ಗೆ ಲಸಿಕೆ ಹಾಕಿಸಿಕೊಳ್ಳಲು ಮುಂದಾಗುದ್ದಾರೆ.