ಕರಾವಳಿಯಲ್ಲಿ ಮುಂದುವರಿದ ಮುಂಗಾರು ಹಿನ್ನೆಲೆ ➤ ಪ್ರಾಕೃತಿಕ ವಿಕೋಪ ಉಂಟಾದಲ್ಲಿ ಪೊಲೀಸ್ ಸಹಾಯವಾಣಿ ಸಂಪರ್ಕಿಸಲು ದ.ಕ ಜಿಲ್ಲಾ ಪೊಲೀಸ್ ಮನವಿ

(ನ್ಯೂಸ್ ಕಡಬ) Newskadaba.com ಮಂಗಳೂರು, ಜೂ. 13. ಜಿಲ್ಲೆಯಾದ್ಯಂತ ಮುಂಗಾರು ಚುರುಕುಗೊಂಡಿದ್ದು, ಕಳೆದೆರಡು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ. ಇಂದು ಸಂಜೆಯೂ ಜೋರಾಗಿ ಮಳೆ ಸುರಿದಿದ್ದಲ್ಲದೇ ರಾತ್ರಿ ಯೂ ಮಳೆಯಾಗಲಿದೆ ಎನ್ನಲಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಸಣ್ಣಪುಟ್ಟ ತೊಂದರೆಯಾಗಿದೆ.‌ ಕೆಲವೆಡೆ ಮರಗಳು ಬಿದ್ದು ಅವಾಂತರ ಸೃಷ್ಟಿಸಿದೆ. ಮಳೆಯ ಬಿರುಸು ಹೆಚ್ಚಾಗಿರುವುದರಿಂದ ಮುಂದಿನ ನಾಲ್ಕು ದಿನಗಳ ಕಾಲ ಕರಾವಳಿಯಲ್ಲಿ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಭಾಗಗಳಾದ್ಯಂತ ಭಾರಿ ಮಳೆ ಮುಂದುವರಿಯುವ ಮುನ್ಸೂಚನೆ ಇದೆ.

Also Read  ➤ ವರ್ತುರು ಕೆರೆಗೆ ಸೇರುತ್ತಿದೆ ವಿಷಕಾರಿ ದ್ರವ ➤ ಗ್ರಾಮಸ್ಥರ ಆತಂಕ !

ಪ್ರಸ್ತುತ ಮಳೆಗಾಲ ಸಂದರ್ಭದಲ್ಲಿ ಪ್ರಾಕೃತಿಕ ವಿಕೋಪಗಳಾದ ಭೂಕುಸಿತ, ನೆರೆ, ಸೇತುವೆ ಹಾಗೂ ರಸ್ತೆಗಳ ಸಂಪರ್ಕ ಸ್ಥಗಿತ ಉಂಟಾದಲ್ಲಿ ನೆರವಿಗಾಗಿ 112 ಸಹಾಯವಾಣಿ, ಹತ್ತಿರದ ಪೊಲೀಸ್ ಠಾಣೆ ಅಥವಾ ಪೊಲೀಸ್ ಕಂಟ್ರೋಲ್‌ ರೂಂ ಸಂಖ್ಯೆ 08242220500/ 9480805300 ಯನ್ನು ಸಂಪರ್ಕಿಸಲು ದ.ಕ ಜಿಲ್ಲಾ ಪೊಲೀಸ್ ಮನವಿ ಮಾಡಿದೆ.

error: Content is protected !!
Scroll to Top