ಬಿಜೆಪಿಯ ಹಿರಿಯ ಮುಖಂಡ, ಶಾಸಕ ಸಿ.ಎಂ. ಉದಾಸಿ ವಿಧಿವಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.08. ಹಿರಿಯ ಬಿಜೆಪಿ ಮುಖಂಡ, ಹಾನಗಲ್ ಕ್ಷೇತ್ರದ ಜನಪ್ರಿಯ ಶಾಸಕ ಸಿ‌‌‌.ಎಂ. ಉದಾಸಿ(77) ಅಲ್ಪಕಾಲದ ಅನಾರೋಗ್ಯದಿಂದ ಇಂದು ನಿಧನರಾದರು.

ಕಳೆದ ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಇವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಅಪರಾಹ್ನ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ‌. ಹಾನಗಲ್‌ ವಿಧಾನಸಭಾ ಕ್ಷೇತ್ರದಿಂದ 1983ರಿಂದ ನಿರಂತರವಾಗಿ 9 ಬಾರಿ ಸ್ಪರ್ಧಿಸಿದ ಉದಾಸಿಯವರು 6 ಬಾರಿ ಶಾಸಕರಾಗಿದ್ದರು. ಜನತಾದಳ, ಜೆಡಿಯು, ಕೆಜಿಪಿ ಪಕ್ಷದಿಂದ ಸ್ಪರ್ಧಿಸಿದ್ದ ಇವರು ಕಳೆದ ಒಂದೂವರೆ ದಶಕಗಳಿಂದ ಬಿಜೆಪಿಯ ಮುಖಂಡರಾಗಿದ್ದರು‌.

Also Read  ಸುರತ್ಕಲ್: ಕತ್ತಿಯಿಂದ ಹಲ್ಲೆ- ಬಸ್ಸಿಗೆ ಕಲ್ಲು ತೂರಾಟ ➤‌ ಇಬ್ಬರಿಗೆ ಗಾಯ

 

 

 

error: Content is protected !!
Scroll to Top