ಕಡಬ ತಾಲೂಕಿನ ಈ 1 ಗ್ರಾಮಕ್ಕೆ ಇದುವರೆಗೆ ಕೊರೋನಾ ಕಾಲಿಟ್ಟಿಲ್ಲ ➤ ಆ ಗ್ರಾಮ ಯಾವುದು ಗೊತ್ತೇ..?

(ನ್ಯೂಸ್ ಕಡಬ) newskadaba.com ಕಡಬ, ಜೂ.08. ಕೊರೋನಾ ಎರಡನೇ ಅಲೆಯು ಗ್ರಾಮೀಣ ಭಾಗದಲ್ಲಿ ಬಹಳಷ್ಟು ಜನರನ್ನು ಬಲಿ ತೆಗೆದು ಕೊಂಡಿದೆಯಾದರೂ ಕಡಬ ತಾಲೂಕಿನ ಈ ಒಂದು ಗ್ರಾಮದಲ್ಲಿ ಇದುವರೆಗೆ ಒಂದೇ ಒಂದು ಕೊರೋನಾ ಸೋಂಕು ಕೂಡಾ ಪತ್ತೆಯಾಗಿಲ್ಲ.

ತಾಲೂಕಿನ 42 ಗ್ರಾಮಗಳ ಪೈಕಿ ಕೊಂಬಾರು ಪಂಚಾಯತ್ ನ ಸಿರಿಬಾಗಿಲು ಗ್ರಾಮದಲ್ಲಿ ಇದುವರೆಗೆ ಕೊರೋನಾ ಪ್ರಕರಣಗಳು ಕಂಡುಬಂದಿಲ್ಲ. ಪಕ್ಕದ ಕೊಂಬಾರು ಗ್ರಾಮದಲ್ಲಿ ಹಲವರಿಗೆ ಸೋಂಕು ತಗುಲಿದೆಯಾದರೂ ಸಿರಿಬಾಗಿಲು ಗ್ರಾಮಕ್ಕೆ ಕೊರೋನಾ ಇದುವರೆಗೆ ಕಾಲಿಟ್ಟಿಲ್ಲ. ಸಿರಿಬಾಗಿಲು ಕುಗ್ರಾಮವಾಗಿದೆಯಾದರೂ ಜನರು ತಾಲೂಕು ಕೇಂದ್ರವಾದ ಕಡಬವನ್ನೇ ಅವಲಂಬಿಸಿದ್ದಾರೆ. ಕಡಬದಲ್ಲಿ ಪಾಸಿಟಿವ್ ಪ್ರಕರಣಗಳಿದ್ದರೂ, ಸಿರಿಬಾಗಿಲು ಗ್ರಾಮಸ್ಥರು ಮುಂಜಾಗ್ರತೆ ವಹಿಸಿದ್ದರಿಂದ ಕೊರೋನಾ ಸೋಂಕು ಗ್ರಾಮವನ್ನು ಬಾಧಿಸಲಿಲ್ಲ.

Also Read  Türkiye'nin En İyi Online Bahis Şirket

 

 

 

error: Content is protected !!
Scroll to Top