ಪತ್ನಿಯ ಶೀಲ ಶಂಕಿಸಿದ ಪತಿ ➤ ಬೇಸತ್ತ ಪತ್ನಿಯ ಅಣ್ಣ ಮಾಡಿದ್ದೇನು ಗೊತ್ತೇ..?

(ನ್ಯೂಸ್ ಕಡಬ) newskadaba.com ಮಂಡ್ಯ, ಜೂ.07. ತನ್ನ ಸಹೋದರಿಯ ಶೀಲವನ್ನು ಶಂಕಿಸಿದ ಭಾವನನ್ನು ಕತ್ತು ಹಿಸುಕಿ ಕೊಲೆಗೈದಿದ್ದಲ್ಲದೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ‌ ಎಂದು ಬಿಂಬಿಸಲು ಹೋಗಿ ತಾವೇ ಪೊಲೀಸರ ಅತಿಥಿಯಾದ ಘಟನೆ ಮಂಡ್ಯದಿಂದ ವರದಿಯಾಗಿದೆ.

ಬಂಧಿತ ಆರೋಪಿಯನ್ನು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಚೀಣ್ಯ ನಿವಾಸಿ ಮಂಜುನಾಥ್ ಹಾಗೂ ಆತನ ಸ್ನೇಹಿತ ಗಂಗಾಧರ್ ಎಂದು ಗುರುತಿಸಲಾಗಿದೆ. ಮಂಜುನಾಥ್ ನ ತಂಗಿಯನ್ನು ಕಳೆದ 16 ವರ್ಷಗಳ ಹಿಂದೆ ತುಮಕೂರಿನ ಪುಟ್ಟರಾಜು(40) ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ಕಳೆದ ನಾಲ್ಕೈದು ವರ್ಷಗಳಿಂದ ಇವರಿಬ್ಬರ ನಡುವೆ ಜಗಳಗಳಾಗುತ್ತಿದ್ದು, ಪತಿ ಪುಟ್ಟರಾಜು ಪತ್ನಿಯ ಶೀಲ ಶಂಕಿಸಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಆರೋಪಿ ಮಂಜುನಾಥ್ ತನ್ನ ಸ್ನೇಹಿತನ ಜೊತೆ ಸೇರಿ ಪುಟ್ಟರಾಜುನ ಕತ್ತು ಹಿಸುಕಿ ಕೊಲೆ‌ಮಾಡಿದ್ದಲ್ಲದೆ ಮೃತದೇಹವನ್ನು ರಸ್ತೆಗೆಸೆದು ಅಪಘಾತವೆಂದು ಬಿಂಬಿಸಿ, ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದ್ದರು.

Also Read  ಎಟಿಎಂ ನಿಂದ ನಗದು ದೋಚಿದ ಖತರ್ನಾಕ್ ಕಳ್ಳರು

ಮಂಜುನಾಥನ ಸಾವಿನಲ್ಲಿ ಅನುಮಾನ ವ್ಯಕ್ತಪಡಿಸಿದ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಸಿದ ಪೊಲೀಸರು ಕೊಲೆ ಪ್ರಕರಣ ಭೇದಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

 

 

 

error: Content is protected !!
Scroll to Top