ತನ್ನ ಸೊಸೆಯನ್ನೇ 80 ಸಾವಿರ ರೂ.ಗೆ ಮಾರಿದ ಪಾಪಿ ಮಾವ ➤ ಸಿನಿಮೀಯ ಶೈಲಿಯಲ್ಲಿ ಆರೋಪಿ ಖಾಕಿ ಬಲೆಗೆ

(ನ್ಯೂಸ್ ಕಡಬ) newskadaba.com ಲಕ್ನೋ, ಜೂ.07. ಮಾವನೇ ತನ್ನ ಸೊಸೆಯನ್ನು (ಮಗನ ಪತ್ನಿ) 80 ಸಾವಿರ ರೂ. ಗಳಿಗೆ ಮಾರಾಟ ಮಾಡಿರುವ ಅಮಾನವೀಯ ಘಟನೆ ಲಕ್ನೋದಿಂದ ವರದಿಯಾಗಿದೆ.

ಉತ್ತರ ಪ್ರದೇಶದ ಲಕ್ನೋ ನಿವಾಸಿ ಪ್ರಿನ್ಸ್ ಎಂಬಾತ ಸೋಶಿಯಲ್​ ಮೀಡಿಯಾ ಮೂಲಕ ಪರಿಚಯವಾಗಿದ್ದ ಅಸ್ಸಾಂ ಮೂಲದ ಯುವತಿಯನ್ನು ಮದುವೆಯಾಗಿದ್ದ ಎನ್ನಲಾಗಿದೆ. ತನ್ನ ಪುತ್ರ ಮದುವೆಯಾಗಿರುವ ವಿಚಾರ ತಿಳಿದ ಪ್ರಿನ್ಸ್ ನ ತಂದೆ ಸೊಸೆಯನ್ನು ತನ್ನ ಮನೆಗೆ ಕರೆಸಿದ್ದಾರೆ‌. ಜೂನ್ 04 ರಂದು ಯುವತಿಯು ಗಂಡನ ತಂದೆಯ ಮನೆಗೆ ಬಂದಿದ್ದು, ಅಲ್ಲಿದ್ದ ಯುವಕನೋರ್ವ ನಿನ್ನನ್ನು ಗಂಡನ ಮನೆಗೆ ಬಿಡುತ್ತಾನೆ ಎಂದು ಹೇಳಿ ಸಂಜೆ ವೇಳೆಗೆ ಆತನ ಜೊತೆ ಕಳುಹಿಸಿಕೊಟ್ಟಿದ್ದಾರೆ. ಆದರೆ ಆತ ಆಕೆಯನ್ನು ಬೇರೆಡೆಗೆ ಕರೆದೊಯ್ದಿದ್ದು, ರಾತ್ರಿಯಾದರೂ ಯುವತಿಯು ಮನೆಗೆ ಬಾರದ ಹಿನ್ನೆಲೆಯಲ್ಲಿ ಆಕೆಯ ಸಹೋದರ ಪ್ರಿನ್ಸ್ ಗೆ ಕರೆಮಾಡಿ ವಿಚಾರ ತಿಳಿಸಿದ್ದಾನೆ.

Also Read  ದುಬೈನಿಂದ ಸುಮಾರು 85 ಲಕ್ಷ ರೂ ಮೌಲ್ಯದ ಅಕ್ರಮ ಚಿನ್ನ ಹಾಗೂ ಸರಕು ಸಾಗಾಟ ➤ ಇಬ್ಬರ ಬಂಧನ

ಜೂನ್ 05 ರಂದು ಪ್ರಿನ್ಸ್​ ತನ್ನ ತಂದೆಯ ಮನೆಗೆ ಹೋಗಿದ್ದು, ಯಾರೂ ಇಲ್ಲದಿರುವುದನ್ನು ಕಂಡು ಪೊಲೀಸರಿಗೆ ದೂರು ನೀಡಿದ್ದಾನೆ. ಪ್ರಕರಣದ ಜಾಡು ಹಿಡಿದ ಪೊಲೀಸರು ಪ್ರಿನ್ಸ್ ನ ತಂದೆಯನ್ನು ಪತ್ತೆಹಚ್ಚಿ ತನಿಖೆ ನಡೆಸಿದಾಗ, ಆತ ತನ್ನ ಸೊಸೆಯನ್ನು 80 ಸಾವಿರ ರೂಪಾಯಿಗೆ ಯುವಕನಿಗೆ ಮಾರಿರುವ ವಿಚಾರ ಹೊರಬಿದ್ದಿದೆ. ಯುವತಿಯನ್ನು ರಕ್ಷಿಸಲಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

 

 

error: Content is protected !!
Scroll to Top