ಸಹೋದ್ಯೋಗಿ ಮಹಿಳೆ ಜೊತೆ ಸಬ್ ಇನ್ಸ್‌ಪೆಕ್ಟರ್ ಸರಸ ಸಲ್ಲಾಪ ➤ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಜೋಡಿ

(ನ್ಯೂಸ್ ಕಡಬ) newskadaba.com ಹೈದರಾಬಾದ್, ಜೂ.07. ತನ್ನ ಸಹೋದ್ಯೋಗಿಯೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿದ್ದ ಎಸ್ಐ ಓರ್ವರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಹೈದರಾಬಾದ್​ನ ಜವಹರ್​ ನಗರ ಠಾಣೆಯ ಸಬ್​ ಇನ್ಸ್​ಪೆಕ್ಟರ್​ ಅನಿಲ್​ ಎಂಬಾತ ತಾನು ಕರ್ತವ್ಯ ನಿರ್ವಹಿಸುತ್ತಿದ್ದ ಠಾಣೆಯ ವಿವಾಹಿತ ಮಹಿಳೆಯೊಂದಿಗೆ ಹಲವು ಸಮಯಗಳಿಂದ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಈ ಬಗ್ಗೆ ಪೊಲೀಸ್ ದೂರು ಕೂಡಾ ದಾಖಲಾಗಿದ್ದು, ಈ ನಡುವೆ ತಿಮ್ಮೈಪಲ್ಲಿ ಎಂಬಲ್ಲಿನ ರೆಸಾರ್ಟ್​ವೊಂದರಲ್ಲಿ ಅನಿಲ್​ ಮತ್ತು ಮಹಿಳೆ ಸರಸದಲ್ಲಿ ತೊಡಗಿದ್ದ ವೇಳೆ ದಾಳಿ ನಡೆಸಿದ ಕೀಸರ ಠಾಣಾ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ವಿಚಾರ ತಿಳಿದ ರಾಚಕೊಂಡ ಪೊಲೀಸ್​ ಆಯುಕ್ತ ಮಹೇಶ್​ ಭಾಗವತ್​ ಅವರು ಎಸ್ಐ ಅನಿಲ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದು, ಆಂತರಿಕ ತನಿಖೆಗೆ ಸೂಚಿಸಿದ್ದಾರೆ.

Also Read  ಹೆಜ್ಜೇನು ದಾಳಿಗೆ ಕೋಟಿ ಮೌಲ್ಯದ 2 ಕುದುರೆ ಮೃತ್ಯು!

 

 

error: Content is protected !!
Scroll to Top