ಲಾಕ್‍ಡೌನ್ ಉಲ್ಲಂಘಿಸಿ ಸಚಿವ ಎಸ್.ಅಂಗಾರರ ನೇತೃತ್ವದಲ್ಲಿ ಬಿಜೆಪಿ ಸಭೆ..? ➤ ವರದಿಗೆ ತೆರಳಿದ್ದ ಮಾಧ್ಯಮ ಪ್ರತಿನಿಧಿಗೆ ಘೇರಾವ್..?

(ನ್ಯೂಸ್ ಕಡಬ) newskadaba.com ಕಡಬ, ಜೂ.06. ರಾಜ್ಯದಲ್ಲಿ ಲಾಕ್‍ಡೌನ್ ಜಾರಿಯಲ್ಲಿದ್ದರೂ, ಲಾಕ್‍ಡೌನ್ ಆದೇಶವನ್ನು ಉಲ್ಲಂಘಿಸಿ ಸಚಿವ ಎಸ್. ಅಂಗಾರರ ನೇತೃತ್ವದಲ್ಲಿ ಸುಮಾರು ನೂರರಷ್ಟು ಬೆಂಬಗಲಿಗರೊಂದಿಗೆ ರಾಜಕೀಯ ಸಭೆ ನಡೆಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.

ಭಾನುವಾರದಂದು ಕಡಬದ ವಿದ್ಯಾನಗರದಲ್ಲಿರುವ ಸರಸ್ವತೀ ಶಾಲೆಯಲ್ಲಿ ಸಚಿವ ಎಸ್.ಅಂಗಾರ ನೇತೃತ್ವದಲ್ಲಿ ಕಾರ್ಯಕರ್ತರ ಬೃಹತ್ ಸಭೆ ನಡೆದಿದೆ. ಲಾಕ್ ಡೌನ್ ನಿಯಮಗಳನ್ನು ಗಾಳಿಗೆ ತೂರಿ ಸಭೆ ನಡೆಸಲಾಗಿದೆ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾದ ಹಿನ್ನೆಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಬದಿ ನಿಂತು ವೀಡಿಯೋ ಚಿತ್ರೀಕರಣ ಮಾಡುತ್ತಿದ್ದರು ಎನ್ನಲಾಗಿದೆ. ಈ ವೇಳೆ ಕೆಲವು ಕಾರ್ಯಕರ್ತರು ಮಾಧ್ಯಮ ವರದಿಗಾರರ ಮೇಲೆ ದರ್ಪ ತೋರಿದ್ದು, ವೀಡಿಯೋ ಚಿತ್ರೀಕರಣಕ್ಕೆ ತಡೆಯೊಡ್ಡಿರುವುದಾಗಿ ವರದಿಯಾಗಿದೆ. ಅಲ್ಲದೇ ಮಾಧ್ಯಮದವರ ಫೋಟೊ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ.

Also Read  ಉಡುಪಿ: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ► ನಡು ರಸ್ತೆಯಲ್ಲೇ ಹೊತ್ತಿ ಉರಿದ ಕಾರು

ಇಂದಿನ ಸಭೆಯು ಕೋವಿಡ್ 19 ತುರ್ತು ನಿರ್ವಹಣೆ ಸಭೆ ಎಂದು ಒಂದೆಡೆ ಸಚಿವರು ಹೇಳಿದರೆ ರಾಜಕೀಯ ಪಕ್ಷದ ಸಭೆ ಎಂಬ ಆರೋಪ ಇನ್ನೊಂದೆಡೆ ಕೇಳಿಬಂದಿದೆ.

 

 

error: Content is protected !!
Scroll to Top