ನೆಲ್ಯಾಡಿ ಸೀನಿಯರ್ ಛೇಂಬರ್ ವತಿಯಿಂದ ಪರಿಸರ ದಿನಾಚರಣೆ

(ನ್ಯೂಸ್ ಕಡಬ) Newskadaba.com ನೆಲ್ಯಾಡಿ, ಜೂ. 05. ಪರಿಸರ ಸಂರಕ್ಷಣೆ ನಮ್ಮೆಲ್ಲರ ‌ಹೊಣೆಯಾಗಿದೆ. ಇಂದಿನ ಕಾಲಮಾನದಲ್ಲಿ ಪರಿಸರದ ಉಳಿವಿನ ಕಡೆಗೆ ಹೆಚ್ಚು ‌ಹೆಚ್ಚು ಒತ್ತು ನೀಡಬೇಕು. ಪ್ರತಿ ವರ್ಷ ಪರಿಸರ ದಿನದಂದು ಕೇವಲ ಸಂಕೇತವಾಗಿ ಗಿಡನೆಡುವುದು ಆಗಬಾರದು, ನೆಟ್ಟ ಗಿಡಗಳನ್ನು ಪೋಷಿಸಬೇಕು ಆಗ ಮಾತ್ರ ಆಚರಣೆಗೆ ಮಹತ್ವ ಬರುತ್ತದೆ ಎಂದು ನೆಲ್ಯಾಡಿ ಸೀನಿಯರ್ ಛೇಂಬರ್ ನ ವತಿಯಿಂದ ವಿಶ್ವ ಪರಿಸರದ ದಿನಾಚರಣೆಯ ಪ್ರಯುಕ್ತ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜು ನೆಲ್ಯಾಡಿಯಲ್ಲಿ ಹಣ್ಣುಗಳ ಗಿಡಗಳನ್ನು ನೆಡುವ ಮತ್ತು ಹೈಸ್ಕೂಲ್ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ” ಪರಿಸರ ಸಂರಕ್ಷಣೆ ಮತ್ತು ಕೊರೋನ” ಎಂಬ ವಿಷಯದ ಮೇಲೆ ಪ್ರಬಂಧ ಸ್ಪರ್ಧೆಯನ್ನು ಮತ್ತು ಪ್ರೈಮರಿ ವಿದ್ಯಾರ್ಥಿ ಗಳಿಗೆ “ಪರಿಸರ ಸಂರಕ್ಷಣೆ” ವಿಷಯದ ಮೇಲೆ ಚಿತ್ರಕಲೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಇದರಲ್ಲಿ ಸುಮಾರು 80 ವಿದ್ಯಾರ್ಥಿಗಳು ಭಾಗವಹಿಸಿದ್ದರು.

Also Read  ಕಡಬ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸಿಯಾಬುದ್ದೀನ್ ನಾಮಪತ್ರ ಸಲ್ಲಿಕೆ

ವಿಜೇತರುಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಸಂತ ಜಾಜ್ ಪದವಿಪೂರ್ವ ಕಾಲೇಜಿನ ಸಂಚಾಲಕರು ಮತ್ತು ನೆಲ್ಯಾಡಿ ಸೀನಿಯರ್ ಛೇಂಬರ್ ನ ಸ್ಥಾಪಕಾಧ್ಯಕ್ಷರಾದ ಅಬ್ರಹಾಂ ವರ್ಗೀಸ್ ಮಾತನಾಡಿದರು. ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಅಮೃತ ರಾಜೇಂದ್ರ ಹೆಗಡೆ, ಶ್ರೀ ಮಾರಿಕಾಂಭ ಸರಕಾರಿ ಪೌಢಶಾಲೆ ಶಿರಸಿ, ದ್ವಿತೀಯ ಬಹುಮಾನವನ್ನು ಶರಮಣ್ಯ ಎಸ್ ಅಚಾರಿಯ, ಜೈನ್ ಹೈಸ್ಕೂಲ್ ಮೂಡುಬಿದಿರೆ ಹಾಗೂ ಮಾನ್ಯ ಆರ್. ಜೆ, ಸರಕಾರಿ ಪ್ರೌಢಶಾಲೆ ಉಜಿರೆ, ಚಿತ್ರಕಲೆಯಲ್ಲಿ ಪ್ರಥಮ ಸ್ಧಾನ ಜೆಸ್ವಿತ್ ತೋಟ, ಸೈಂಟ್ ಅ್ಯನ್ಸ್ ಕಡಬ, ದ್ವಿತೀಯ ಸ್ಧಾನ ಶ್ರವಣ್ ಸರಸ್ವತಿ ವಿದ್ಯಾಕೇಂದ್ರ ಕಡಬ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ನೆಲ್ಯಾಡಿ ‌ಸೀನಿಯರ್ ಛೇಂಬರ್ ನ ಅಧ್ಯಕ್ಷರಾದ ಡಾ. ಸದಾನಂದ ಕುಂದರ್, ಕಾರ್ಯದಶಿ ಪ್ರಶಾಂತ ಸಿ.ಎಚ್, ಕೋಶಾಧಿಕಾರಿ ವೆಂಕಟರಮಣ ‌ಅರ್, ಕಾಲೇಜಿನ ಪ್ರಾಂಶುಪಾಲರಾದ ಏಲಿಯಸ್, ಮುಖ್ಯಗುರುಗಳಾದ ತೋಮಸ್ ಹಾಗೂ ಸದಸ್ಯರಾದ ವಿಶ್ವನಾಥ ರೈ ಉಪಸ್ಥಿತರಿದ್ದರು.

Also Read  ಕಡಬ: ಯುವಮೋರ್ಚಾ ವತಿಯಿಂದ ಉಚಿತ ಆಯುಷ್ಮಾನ್‌ ಕಾರ್ಡ್‌ ಅಭಿಯಾನ

error: Content is protected !!
Scroll to Top