(ನ್ಯೂಸ್ ಕಡಬ) newskadaba.com ಕಡಬ, ಜೂ.05. ಇಲ್ಲಿನ ಮುಳಿಮಜಲು ಕಾಲೋನಿಯಲ್ಲಿ ನಾಲ್ಕು ಮಂದಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಇವರನ್ನು ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಿ, ಮನೆ ಹಾಗೂ ಸೋಂಕಿನ ವರದಿ ಬಂದ ಬಳಿಕವೂ ಸೋಂಕಿತ ಭೇಟಿ ನೀಡಿದ ಕಡಬದ ಜೆ.ಎಮ್,ಜೆ. ಕ್ಲಿನಿಕ್‌ನ್ನು ಸೀಲ್ ಡೌನ್ ಮಾಡಲಾಗಿದೆ.
ಮುಳಿಮಜಲು ಕಾಲೋನಿಯ ವ್ಯಕ್ತಿಯೋರ್ವರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟ ಹಿನ್ನಲೆಯಲ್ಲಿ ಅವರ ಪ್ರಾಥಮಿಕ ಸಂಪರ್ಕದ ಹಿನ್ನಲೆಯಲ್ಲಿ ಅವರ ಮನೆಯವರು ಹಾಗೂ ಕಾಲೋನಿಯ ಇತರ ಮನೆಯವರನ್ನು ಪರೀಕ್ಷೆಗೊಳಪಡಿಸಲಾಗಿದ್ದು ಅದರಲ್ಲಿ ೪ ಮಂದಿ ಕೊರೋನಾ ಸೋಂಕು ಇರುವುದು ದೃಢಪಟ್ಟಿತ್ತು, ಈ ಹಿನ್ನಲೆಯಲ್ಲಿ ಕಡಬ ಸಮುದಾಯ ಆರೋಗ್ಯ ಕೇಂದ್ರದವರು, ಕಡಬ ಪಟ್ಟಣ ಪಂಚಾಯತ್ ನೋಡೆಲ್ ಅಧಿಕಾರಿ ಹರೀಶ್ ಬೆದ್ರಾಜೆ, ಆಶಾಕಾರ್ಯಕರ್ತೆ ಅಲ್ಲಿಗೆ ಭೇಟಿ ನೀಡಿದ್ದು ಈ ವೇಳೆ ಕೊರೋನಾ ಸೋಂಕಿತನೋರ್ವ ಕಡಬದ ಕ್ಲೀನಿಕ್‌ಗೆ ಹೋಗಿದ್ದರು, ಇದೇ ವೇಳೆ ಆರೋಗ್ಯ ಸಹಾಯಕಿಯವರು ಕೊರೋನಾ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗೆ ಬರುವಂತೆ ಹೇಳಿದಾಗ ಪ್ರಾರಂಭದಲ್ಲಿ ಒಪ್ಪಲಿಲ್ಲ. ಕೂಡಲೇ ಕಡಬ ಪೋಲಿಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಆಗಮಿಸಿದ ಕಡಬ ಎಸ್.ಐ. ರುಕ್ಮ ನಾಯ್ಕ್ ಕಡಬಕ್ಕೆ ತೆರಳಿದ್ದ ಕೊರೋನಾ ಸೊಂಕಿತ ಹಾಗೂ ಮನೆಯಲ್ಲಿದ್ದ ಕೊರೋನಾ ಸೊಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗೆ ದಾಖಲು ಆಗುವಂತೆ ಸೂಚಿಸಿದರು. ಬಳಿಕ ಕಾಲೋನಿಯನ್ನು ಸೀಲ್ ಡೌನ್ ಮಾಡಿ ಬಳಿಕ ಕಡಬದ ಜೆಎಮ್‌ಜೆ ಕ್ಲಿನಿಕ್‌ನ್ನು ಸೀಲ್ ಡೌನ್ ಮಾಡಲಾಯಿತು.