(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.05. ಕೆಎಸ್ಸಾರ್ಟಿಸಿ ನಮ್ಮದೇ ಆಸ್ತಿಯಾಗಿದ್ದು, ಈ ಬಗ್ಗೆ ಯಾರು ಕೂಡಾ ಆತಂಕ ಪಡುವ ಅಗತ್ಯವಿಲ್ಲ ಎಂದು ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ ಮತ್ತು ಕೇರಳ ನಡುವಿನ ಕೆಎಸ್ಸಾರ್ಟಿಸಿ ಟ್ರೇಡ್‌ಮಾರ್ಕ್ ಪ್ರಕರಣದಲ್ಲಿ ಕೇಂದ್ರ ಟ್ರೇಡ್‌ಮಾರ್ಕ್ ರಿಜಿಸ್ಟ್ರಿ ಅಥವಾ ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿಯು ಯಾವುದೇ ಆದೇಶ ಹೊರಡಿಸಿಲ್ಲ. ಕೆಎಸ್ಸಾರ್ಟಿಸಿಯು ಟ್ರೇಡ್ ಮಾರ್ಕ್ ರಿಜಿಸ್ಟ್ರಿಗೆ 2010ರಲ್ಲಿ ಅರ್ಜಿ ಸಲ್ಲಿಸಿ, 2013ರಲ್ಲಿ ಅನುಮೋದನೆ ಪಡೆದುಕೊಂಡಿದ್ದು, 2023ರ ವರೆಗೆ ಇದರ ಅವಧಿ ಮುಂದುವರಿಯಲಿದೆ. ಕೇರಳವು 2019ರಲ್ಲಿ ಟ್ರೇಡ್‌ಮಾರ್ಕ್‌ಗೆ ಅರ್ಜಿ ಸಲ್ಲಿಸಿದ್ದು, ಇತ್ತೀಚೆಗೆ ಅನುಮೋದನೆಗೊಂಡ ಕಾರಣ ತಪ್ಪಾಗಿ ಅರ್ಥೈಸಲಾಗಿದೆ ಎಂದವರು ತಿಳಿಸಿದ್ದಾರೆ.