ಬ್ರೇಕ್ ಎಂದು ಎಕ್ಸ್‌ಲೇಟರ್ ತುಳಿದ ಚಾಲಕಿ ➤ ಕ್ಷಣಮಾತ್ರದಲ್ಲಿ ಬಾವಿಯೊಳಗೆ ಬಿದ್ದ ಕಾರು

(ನ್ಯೂಸ್ ಕಡಬ) newskadaba.com ಉಡುಪಿ, ಜೂ.04. ಬ್ರೇಕ್ ಎಂದು ತಿಳಿದು ಎಕ್ಸಲೇಟರ್​ ತುಳಿದ ಪರಿಣಾಮ ಕಾರೊಂದು ಬಾವಿಯೊಳಗಡೆ ಬಿದ್ದ ಘಟನೆ ಉಡುಪಿಯಲ್ಲಿ‌ ನಡೆದಿದೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ನಿವಾಸಿ ಶ್ರೀನಿವಾಸ ಅಡಿಗ ಎಂಬವರ ಸೊಸೆ ಕಾರನ್ನು ರಿವರ್ಸ್ ತೆಗೆಯುತ್ತಿದ್ದ ವೇಳೆ ಬ್ರೇಕ್ ಬದಲಿಗೆ ಎಕ್ಸಲೇಟರನ್ನು ತುಳಿದಿದ್ದು, ಈ ವೇಳೆ ಏಕಾಏಕಿ ಹಿಮ್ಮುಖವಾಗಿ ಚಲಿಸಿದ ಕಾರು ನೇರವಾಗಿ ಮನೆಯ ಬಾವಿಯೊಳಗೆ ಬಿದ್ದಿದೆ. ಗಂಭೀರತೆಯನ್ನು ಅರಿತ ಚಾಲಕಿಯು ತಕ್ಷಣವೇ ಕಾರಿನಿಂದ ಹೊರಗಡೆ ಹಾರಿದ ಪರಿಣಾಮ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಇದೀಗ ಕಾರು ಬಾವಿಯೊಳಗಿರುವ ವೀಡಿಯೋ ವೈರಲ್ ಆಗಿದೆ.

Also Read  ತನ್ನ ಪತ್ನಿ ಮತ್ತು ಮಗಳಿಗೆ ಕೊರೋನಾ ಸೋಂಕು ದೃಢ..!!! ➤ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಟ್ವೀಟ್

 

 

 

error: Content is protected !!
Scroll to Top