ರಮೇಶ್ ಜಾರಕಿಹೊಳಿಗೆ ಮತ್ತೆ ‘ಸೆಕ್ಸ್ ಸಿಡಿ’ ಕಂಟಕ ➤ ಸಂಪುಟ ಸೇರ್ಪಡೆಗೆ ಮುಳುವಾದ ಸಿಡಿ ಪ್ರಕರಣ

(ನ್ಯೂಸ್ ಕಡಬ) newskadaba com ಬೆಂಗಳೂರು, ಜೂ.04. ಸೆಕ್ಸ್ ಸಿಡಿ ಪ್ರಕರಣದಲ್ಲಿ ಕ್ಲೀನ್ ಚಿಟ್ ​ನ ಖುಷಿಯಲ್ಲಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ನಿರಾಸೆಯಾಗಿದ್ದು, ಸದ್ಯಕ್ಕೆ ಸಚಿವ ಸಂಪುಟಕ್ಕೆ ಸೇರಲು ತೆರೆಮರೆಯಲ್ಲಿ ನಡೆಯುತ್ತಿದ್ದ ಪ್ರಕ್ರಿಯೆಗೆ ಬ್ರೇಕ್ ಬಿದ್ದಿದೆ.

ಸಚಿವ ಸಂಪುಟ ಪುನರ್ ​ ರಚನೆ ಪ್ರಕ್ರಿಯೆಯಲ್ಲಿ ರಮೇಶ್ ಜಾರಕಿಹೊಳಿ ಮತ್ತೆ ಮಂತ್ರಿಯಾಗುವ ಇರಾದೆಯನ್ನು ವ್ಯಕ್ತಪಡಿಸಿದ್ದರಲ್ಲದೆ ಈ ಬಗ್ಗೆ ತೆರೆಮರೆಯ ಕಸರತ್ತು ನಡೆದಿತ್ತು. ಆದರೆ ಇದೀಗ ಸೆಕ್ಸ್ ಸಿಡಿ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಕೆ ಪ್ರಕ್ರಿಯೆಯನ್ನು ಎಸ್ಐಟಿಯು ಮುಂದೂಡಿದ್ದು, ಈ ಮೂಲಕ ಜಾರಕಿಹೊಳಿಯ ಸಂಪುಟ ಸೇರ್ಪಡೆಗೆ ಸೆಕ್ಸ್ ಸಿಡಿ ಕಂಟಕವಾಗಿದೆ. ಈಗಾಗಲೇ ಪ್ರಕರಣದ ವರದಿಯನ್ನು ಹೈಕೋರ್ಟ್ ​​ ಗೆ ನೀಡಲಾಗಿದ್ದು ಮುಂದಿನ ವಾರದಲ್ಲಿ ಸ್ಟೇಟಸ್ ರಿಪೋರ್ಟನ್ನು ಎಸ್ಐಟಿ ಹೈಕೋರ್ಟ್ ಗೆ ಸಲ್ಲಿಸಲಿದೆ.

Also Read  ಪುತ್ತೂರು : ತಂದೆಯನ್ನೆ ಹತ್ಯೆಗೈದ ಪಾಪಿ ಪುತ್ರ

 

 

 

error: Content is protected !!
Scroll to Top