ಇನ್ಮುಂದೆ ನೀವು ಮನೆಯಲ್ಲೇ ಕುಳಿತು ಕೊರೋನಾ ಟೆಸ್ಟ್ ಮಾಡಿ ➤ ಹೊಸದಾಗಿ ಬಂದ ‘ಕೋವಿಸೆಲ್ಫ್’ ಕಿಟ್ ನ ಬೆಲೆ ಎಷ್ಟು ಗೊತ್ತೇ..?

(ನ್ಯೂಸ್ ಕಡಬ) newskadaba.com ನವದೆಹಲಿ, ಜೂ.04. ಇನ್ಮುಂದೆ ಕೊರೋನಾ ಟೆಸ್ಟ್ ಮಾಡಿಸಲು ಆಸ್ಪತ್ರೆಗೆ ತೆರಳಿಯೇ ಆಗಬೇಕೆಂದಿಲ್ಲ. ಯಾಕೆಂದರೆ ನಮ್ಮ ಮನೆಯಲ್ಲೇ ಕೊರೋನಾ ಪರೀಕ್ಷೆ ನಡೆಸಿ ಕೇವಲ 15 ನಿಮಿಷಗಳಲ್ಲಿ ರಿಪೋರ್ಟ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಕೇವಲ 15 ನಿಮಿಷಗಳಲ್ಲಿ ಕೊರೋನಾ ಸೋಂಕನ್ನು ಪತ್ತೆ ಹಚ್ಚುವ, ಭಾರತದಲ್ಲಿ ಪ್ರಥಮ ಬಾರಿಗೆ ತಯಾರಾಗಿರುವ ಟೆಸ್ಟಿಂಗ್​ ಕಿಟ್​ ಗುರುವಾರದಂದು ಮಾರುಕಟ್ಟೆಗೆ ಬಂದಿದ್ದು, ದೇಶದಾದ್ಯಂತ ಮೆಡಿಕಲ್​ ಸ್ಟೋರ್​ಗಳಲ್ಲಿ ಇದು ಎರಡರಿಂದ ಮೂರು ದಿನಗಳಲ್ಲಿ ಲಭ್ಯವಾಗಲಿದೆ. ಪುಣೆಯ ಮೈಲ್ಯಾಬ್ ಡಿಸ್ಕವರಿ ಸೊಲ್ಯೂಶನ್ಸ್ ಲಿಮಿಟೆಡ್ ಸಂಸ್ಥೆಯು ಬಿಡುಗಡೆಗೊಳಿಸಿರುವ ‘ಕೋವಿಸೆಲ್ಫ್’ ಕಿಟ್ ನ ಬೆಲೆ ರೂ. 250 ಇರಲಿದೆ.

Also Read  ಯೂಟ್ಯೂಬ್ ವಿಡಿಯೋ ಲೈಕ್ ಮಾಡಿ 24 ಲಕ್ಷ ರೂ. ಕಳೆದುಕೊಂಡ ಯುವತಿ..!

ಜನರು ತಮ್ಮ ಮನೆಗಳಲ್ಲೇ ಕೊರೋನಾ ಟೆಸ್ಟ್​ ಮಾಡಿಕೊಳ್ಳಬಹುದಾದ ಮೊದಲ ಕಿಟ್​ ಇದಾಗಿದ್ದು, ಭಾರತೀಯ ವೈದ್ಯಕೀಯ ಸಂಶೋಧನೆ ಕೌನ್ಸಿಲ್ (ICMR) ನಿಂದ ಅನುಮೋದನೆ ಪಡೆದ ನಂತರ ಇದೀಗ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

 

 

 

error: Content is protected !!
Scroll to Top