ತಹಶೀಲ್ದಾರ್ ಬಳಿ ಇಲ್ಲ ತಾಲೂಕು ವ್ಯಾಪ್ತಿಯ ಕೊರೋನಾ ಅಂಕಿ ಅಂಶ..! ಅಧಿಕಾರಿಗಳೇ ನಿರ್ಲಕ್ಷ್ಯಿಸಿದರೆ ಸಿಬಂದಿಗಳನ್ನು ಕೇಳುವವರು ಯಾರು?

(ನ್ಯೂಸ್ ಕಡಬ) newskadaba.com ಕಡಬ, ಜೂ.03. ಆರೋಗ್ಯ ಇಲಾಖೆಯ ವರದಿಯಂತೆ ಜೂ.03ರಂದು ಕಡಬ ತಾಲೂಕು ವ್ಯಾಪ್ತಿಯ 98 ಮಂದಿಗೆ ಕೊರೊನಾ ದೃಢಪಟ್ಟಿದೆ. ಆದರೆ ಕಡಬ ತಹಶೀಲ್ದಾರ್ ಬಳಿ ಈ ಕುರಿತು ಯಾವುದೇ ಮಾಹಿತಿ ಇಲ್ಲದಿರುವುದು ಆಶ್ಚರ್ಯ ತಂದಿದೆ.

ಕಡಬ ತಾಲೂಕಿನ ಕೊರೋನಾ ಅಂಕಿ ಅಂಶಗಳ ಬಗ್ಗೆ ತಹಶೀಲ್ದಾರ್ ಬಳಿ ಮಾಧ್ಯಮದವರು ಮಾಹಿತಿ ಕೇಳಿದರೆ ಅರೋಗ್ಯ ಇಲಾಖೆಯವರಿಂದ ಮಾಹಿತಿ ಪಡೆದುಕೊಳ್ಳಿ ಎನ್ನುವ ಉತ್ತರ ಬರುತ್ತದೆ. ತಾಲೂಕಿನ ವ್ಯಾಪ್ತಿಯಲ್ಲಿ ಎಷ್ಟು ಮಂದಿ ಕೊರೊನಾ ಸೋಂಕಿತರಿದ್ದಾರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಎಷ್ಟು ಮಂದಿ, ಹೋಮ್ ಐಸೋಲೇಶನ್ ನಲ್ಲಿ ಇರುವವರು ಎಷ್ಟು, ಕ್ವಾರಂಟೈನ್ ನಲ್ಲಿ ಇರುವವರು ಎಷ್ಟು ಮಂದಿ, ಕಡಬ ತಾಲೂಕಿನ ಎಷ್ಟು ಮಂದಿ ಸೋಂಕಿತರು ಕೋವಿಡ್ ಕೇರ್ ಸೆಂಟರ್ ಗೆ ದಾಖಲಾಗಿದ್ದಾರೆ ಎನ್ನುವ ಮಾಹಿತಿ, ಕೊರೋನಾ ನಿಯಂತ್ರಣದಲ್ಲಿ ವಿವಿಧ ಇಲಾಖೆಗಳ ಮತ್ತು ಕೋವಿಡ್ ಕಾರ್ಯಪಡೆಗಳ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಬೇಕಿರುವ ತಹಶೀಲ್ದಾರರಿಗೆ ಇಲ್ಲದೇ ಹೋದರೆ ಯಾವ ರೀತಿಯಲ್ಲಿ ಜನರನ್ನು ಜಾಗೃತಗೊಳಿಸುವುದು.? ಇಡೀ ತಾಲೂಕಿನ 42 ಗ್ರಾಮಗಳ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿತರ ಸ್ಥಿತಿಗತಿಯ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರಬೇಕಿದ್ದ ತಹಶೀಲ್ದಾರರೇ ಈ ರೀತಿ ನಿರ್ಲಕ್ಷ್ಯ ವಹಿಸಿದರೆ ಅವರ ಕೈಕೆಳಗೆ ಕೆಲಸ ಮಾಡುವ ಸಿಬಂದಿಗಳಿಂದ ಯಾವ ರೀತಿಯ ಕೆಲಸವನ್ನು ನಿರೀಕ್ಷಿಸಬಹುದು ಎನ್ನುವ ಪ್ರಶ್ನೆ ಎದುರಾಗುತ್ತದೆ.

Also Read  ಕಡಬ ಬ್ಲಾಕ್ ಕಾಂಗ್ರೆಸ್ ನಿಂದ ವಿಜೇತ ಗ್ರಾ.ಪಂ. ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ➤ ಬಿಜೆಪಿಯವರು ಅಧಿಕಾರ ದುರುಪಯೋಗ ಮಾಡಿ ಹೆಚ್ಚು ಸ್ಥಾನ ಗಳಿಸಿದ್ದಾರೆ: ಐವನ್ ಡಿಸೋಜಾ

ತಾಲೂಕು ಮಟ್ಟದ ಮಾಹಿತಿ ಕೇಳಿದರೆ ಕೇವಲ ಕಡಬ ಸಮುದಾಯ ಆಸ್ಪತ್ರೆಯ 8 ಗ್ರಾಮಗಳ ವ್ಯಾಪ್ತಿಯ ಕೊರೊನ ಸೋಂಕಿತರ ಲೆಕ್ಕ ನೀಡುವ ತಹಶೀಲ್ದಾರರು ತಾನು ಇಡೀ ತಾಲೂಕಿನ ದಂಡಾಧಿಕಾರಿ ಎನ್ನುವುದನ್ನು ಮರೆತಿರುವರೇ ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ. ಸಚಿವರ ನೇತೃತ್ವದಲ್ಲಿ ನಡೆಯುವ ಕೋವಿಡ್ ಕಾರ್ಯಪಡೆಯ ಪ್ರಗತಿ ಪರಿಶೀಲನಾ ಸಭೆಯ ದಿನ ಎಲ್ಲಾ ಮಾಹಿತಿಗಳನ್ನು ಕಲೆಹಾಕಿಕೊಂಡು ಬರುವ ತಹಶೀಲ್ದಾರರಿಗೆ ಉಳಿದ ದಿನಗಳಲ್ಲಿ ತಮ್ಮ ವ್ಯಾಪ್ತಿಯ ಆರೋಗ್ಯ ಕೇಂದ್ರಗಳಿಂದ ಅಂದಂದಿನ ಮಾಹಿತಿ ಪಡೆದುಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಹಾಸ್ಯಾಸ್ಪದ ಸಂಗತಿಯಾಗಿದೆ. ಕಡಬ ತಾಲೂಕಿನಲ್ಲಿ ಉಲ್ಬಣಿಸುತ್ತಿರುವ ಕೊರೊನ ಸೋಂಕನ್ನು ಕಟ್ಟುನಿಟ್ಟಿನ ಕ್ರಮಗಳ ಮೂಲಕ ನಿಯಂತ್ರಣ ಮಾಡಬೇಕಿದ್ದರೆ ಕೇವಲ ಪೊಲೀಸರು ಮತ್ತು ಆರೋಗ್ಯ ಇಲಾಖೆಯ ಸಿಬಂದಿಗಳು ಮಾತ್ರ ಕೆಲಸ ಮಾಡಿದರೆ ಸಾಲದು. ಉನ್ನತಾಧಿಕಾರಿಗಳೇ ನಿದ್ದೆಯಲ್ಲಿದ್ದವರಂತೆ ವರ್ತಿಸಿದರೆ ಅವರ ಕೈಕೆಳಗಿನ ಸಿಬಂದಿಗಳನ್ನು ದುಡಿಸುವವರು ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಗಬೇಕಿದ್ದರೆ ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಎಸ್.ಅಂಗಾರ ಅವರು ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕಾದುದು ಅನಿವಾರ್ಯ. ಇಲ್ಲದೇ ಹೋದರೆ ಕೊರೊನಾ ಅಟ್ಟಹಾಸದಿಂದ ಕಡಬ ತಾಲೂಕನ್ನು ರಕ್ಷಣೆ ಮಾಡುವುದು ಅಸಾಧ್ಯದ ಮಾತು ಎನ್ನುವುದು ತಾಲೂಕಿನ ಜನರ ಅಭಿಪ್ರಾಯವಾಗಿದೆ.

Also Read  ಕೊಡಗು: ಕಾರ್ಮಿಕರ ಕೊರತೆ ➤ ಭತ್ತ ಕೊಯ್ಲು ಯಂತ್ರಗಳನ್ನು ಬಾಡಿಗೆಗೆ ಪಡೆಯುತ್ತಿರುವ ರೈತರು

 

 

error: Content is protected !!
Scroll to Top