ಪೊಲೀಸ್ ವೃತ್ತಿಯ ಗೌರವ ಹೆಚ್ಚಿಸಿದ ಕಡಬ ಠಾಣೆಯ ಸಿಬ್ಬಂದಿ ➤ ಜನಸ್ನೇಹಿ ಪೊಲೀಸ್ ಹರೀಶ್ ರ ಬಗ್ಗೆ ಒಂದಿಷ್ಟು…

(ನ್ಯೂಸ್ ಕಡಬ) newskadaba.com ಕಡಬ, ಜೂ.03. ಪೊಲೀಸರು ಎಂದರೆ ಕೈಯಲ್ಲಿ ಲಾಠಿ ಹಿಡಿದು ಕಾನೂನು ಪಾಲನೆ ತಪ್ಪಿದವರನ್ನು ಎಚ್ಚರಿಸುವ ಕಾರ್ಯ ಮಾಡುವವರು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಪೊಲೀಸರು ಎಂದರೆ ಸಮಾಜಮುಖಿಯಾಗಿ ಇರುವುದರೊಂದಿಗೆ ರಸ್ತೆ ದುರಸ್ತಿಯಂತಹ ಕಾರ್ಯಗಳಿಗೆ ನೇತೃತ್ವ ವಹಿಸಿ ಜನಸ್ನೇಹಿಯಾಗಿಯೂ ಕರ್ತವ್ಯ ನಿರ್ವಹಿಸಬಹುದು ಎಂದು ಇಲ್ಲೊಬ್ಬರು ತೋರಿಸಿಕೊಟ್ಟಿದ್ದಾರೆ.

ಹೌದು… ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೆಬಲ್, ಕೊಯಿಲ ಗ್ರಾಮದ ಬೀಟ್ ಪೊಲೀಸ್ ಹರೀಶ್ ಎಂಬವರು ಇದೀಗ ಸಮಾಜಮುಖಿ ಕಾರ್ಯ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಕೊಯಿಲ ಗ್ರಾಮದ ವಳಕಡಮ ಭಾಗದ ಕೆಲವು ರಸ್ತೆಗಳು ಹದಗೆಟ್ಟು ಕೆಸರು ತುಂಬಿ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಇದನ್ನು ಗಮನಿಸಿದ ಹರೀಶ್ ಅವರು ಈ ಭಾಗದ ಪಂಚಾಯಿತಿ ಸದಸ್ಯರು, ಹಿರಿಯ ನಾಗರಿಕರು ಹಾಗೂ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾರ್ವಜನಿಕ ಶ್ರಮದಾನದ ಮೂಲಕ ರಸ್ತೆಯನ್ನು ದುರಸ್ತಿ ಮಾಡಿಸಿ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Also Read  ಮಾನಸಿಕ ಹಿಂಸೆ ಆರೋಪ ➤ ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ

ಕೊಯಿಲ ಗ್ರಾಮದ ಬರಮೇಲು-ವಳಕಡಮ, ವಳಕಡಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ – ಹಾಲಿನ ಸೊಸೈಟಿ ರಸ್ತೆಯ ಬೀಜತ್ತಳಿಕೆ ಹಾಗೂ ಕೆರೆಕೋಡಿ ಮುಂತಾದ ಸ್ಥಳಗಲ್ಲಿ ತೀರಾ ಹದಗೆಟ್ಟಿದ್ದ ರಸ್ತೆಗೆ ಗ್ರಾಮಸ್ಥರ ನೆರವಿನೊಂದಿಗೆ ಕೆಸರು ತೆರವು ಮಾಡಿ ಚರಳು ಹೊಯಿಗೆ ಹಾಸಿ ದುರಸ್ತಿ ಮಾಡಲಾಯಿತು. ಕೊಯಿಲ ಗ್ರಾಪಂ ಸದಸ್ಯ ಚಂದ್ರಶೇಖರ ಗೌಡ ಮಾಳ, ಮಾಜಿ ಅಧ್ಯಕ್ಷ ಶೀನಪ್ಪ ಗೌಡ ವಳಕಡಮ, ಮಾಜಿ ಸದಸ್ಯ ವಿನೋಧರ ಮಾಳ ಬೀಟ್ ಪೊಲೀಸ್‌ಗೆ ಸಾಥ್ ನೀಡಿದರು. ಮರಳು ಉದ್ಯಮಿಗಳಾದ ಚಂದ್ರಹಾಸ ಗೌಡ ಪರಂಗಾಜೆ, ಅಝೀಝ್ ಹಾಗೂ ಲತೀಫ್ ಬಿ.ಎ., ಸುರೇಶ್ ಕುಂಡಡ್ಕ ಅವರು ಚರಳು ನೀಡಿ ಸಹಕರಿಸಿದರು.

ಹರೀಶ್ ಅವರು ಈ ಹಿಂದೆ ಪುತ್ತೂರು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಶಾಂತಿಗೋಡು ಗ್ರಾಮದ ಬೀಟ್ ಪೊಲೀಸ್ ಆಗಿ ಅಲ್ಲಿ ಬೀದಿ ದೀಪ, ಚರಂಡಿ, ರಸ್ತೆ ದುರಸ್ತಿ ಮುಂತಾದ ಜನಸ್ನೇಹಿ ಕೆಲಸಗಳನ್ನು ಮಾಡಿ ಮಾದರಿ ಕರ್ತವ್ಯ ನಿರ್ವಹಿಸಿ ಇಲಾಖೆಯ ಉನ್ನತ ಅಧಿಕಾರಿಗಳಿಂದ ಹಾಗೂ ಸಾರ್ವಜನಿಕರಿಂದ ಮೆಚ್ಚುಗೆ ಗಳಿಸಿದ್ದರು. ಅವರು ಅಲ್ಲಿಂದ ವರ್ಗಾವಣೆಗೊಂಡಾಗ ಊರವರು ಪ್ರೀತಿಯಿಂದ ಗೌರವಿಸಿ ಸನ್ಮಾನಿಸಿ ಬೀಳ್ಕೊಟ್ಟಿದ್ದರು.
ಇದೀಗ ಕೊಯಿಲ ಗ್ರಾಮದಲ್ಲಿ ಕೂಡಾ ಉತ್ತಮ ಕಾರ್ಯಗಳನ್ನು ಮಾಡುತ್ತಾ ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ.

Also Read  ಕೆಎಸ್ಸಾರ್ಟಿಸಿ ಬಸ್ - ಕಾರು ಮಧ್ಯೆ ಮುಖಾಮುಖಿ ಢಿಕ್ಕಿ ➤ ಓರ್ವ ಮೃತ್ಯು, ಇಬ್ಬರು ಗಂಭೀರ

 

 

error: Content is protected !!
Scroll to Top