ಕರಾವಳಿ ಜನತೆಗೆ ಜೀವವಾಯು ಒದಗಿಸಿದ ಖ್ಯಾತ ನಟ ಸೋನು ಸೂದ್..! ➤ ರೈಲ್ವೇ ನಿಲ್ದಾಣದಲ್ಲಿ ಆರಂಭವಾಯಿತು ರ್ಯಾಪಿಡ್ ಆಕ್ಸಿಜನ್ ಕೇಂದ್ರ

(ನ್ಯೂಸ್ ಕಡಬ) Newskadaba.com ಮಂಗಳೂರು, ಜೂ.03. ಖ್ಯಾತ ಬಾಲಿವುಡ್ ನಟ ಸೋನು ಸೂದ್ ಇವರ “ಸೂದ್ ಚಾರಿಟಿ” ವತಿಯಿಂದ ರ್ಯಾಪಿಡ್ ಆಕ್ಸಿಜನ್ ಕೇಂದ್ರವು ಈಗಾಗಲೇ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಆರಂಭಗೊಂಡಿದೆ.

ಕೊರೋನಾ ಹಾವಳಿಯಿಂದಾಗಿ ಹಲವಾರು ರೋಗಿಗಳು ಸೋಂಕು ಪೀಡಿತರಾಗಿ ಉಸಿರಾಟದ ಸಮಸ್ಯೆಯಿಂದ ಜೀವಕಳೆದುಕೊಳ್ಳುತ್ತಿರುವ ಹಿನ್ನೆಲೆ, ಬಾಲಿವುಡ್ ನಟ ಸೋನು ಸೂದ್ ನೇತೃತ್ವದ ಸೂದ್ ಚಾರಿಟಿ ಫೌಂಡೇಶನ್ ವತಿಯಿಂದ ಉಚಿತವಾಗಿ ಆಕ್ಸಿಜನ್ ಸಿಲಿಂಡರ್ ನೀಡಲಾಗುತ್ತಿದೆ. ಈ ಕಾರ್ಯಕ್ಕೆ ಕರ್ನಾಟಕ ರೈಲ್ವೇ ಪೊಲೀಸ್ ಇಲಾಖೆ ಕೂಡಾ ಕೈಜೋಡಿಸಿದೆ. ಅಲ್ಲದೇ ಇದೇ ರೀತಿಯ ಕ್ಷಿಪ್ರ ಆಮ್ಲಜನಕ ಕೇಂದ್ರವು ಹಾಸನ, ಹುಬ್ಬಳ್ಳಿ, ದಾವಣಗೆರೆ ಹಾಗೂ ಬಳ್ಳಾರಿಯಲ್ಲೂ ಕಾರ್ಯನಿರ್ವಹಿಸುತ್ತಿದೆ.

Also Read  ಕೋಲಾರದಲ್ಲಿ ಆತಂಕಕಾರಿ ಸೂಟ್ ಕೇಸ್ ಪತ್ತೆ

 

 

 

error: Content is protected !!
Scroll to Top