ನೀವು ‘ಮ್ಯಾಗಿ’ ಪ್ರಿಯರೇ..? ಎಡೆಬಿಡದೆ ಮ್ಯಾಗಿ ತಿನ್ನುತ್ತಿದ್ದೀರಾ..? ➤ ಹಾಗಾದರೆ ಈ ಸುದ್ದಿಯನ್ನು ತಪ್ಪದೇ ಓದಲೇಬೇಕು

(ನ್ಯೂಸ್ ಕಡಬ) newskadaba.com ನವದೆಹಲಿ, ಜೂ.03. ನೀವು ಮ್ಯಾಗಿ ಪ್ರಿಯರಾಗಿದ್ದಲ್ಲಿ ಈ ಸುದ್ದಿಯನ್ನು ತಪ್ಪದೇ ಓದಲೇಬೇಕು. ಯಾಕೆಂದರೆ, ಮ್ಯಾಗಿ ಸೇರಿದಂತೆ ತಮ್ಮ ಕಂಪನಿಯ ಹಲವು ಆಹಾರ ಮತ್ತು ಪಾನೀಯ ಉತ್ಪನ್ನಗಳು ಶೇ.60ರಷ್ಟು ಆರೋಗ್ಯಕರವಲ್ಲ ಎಂದು ನೆಸ್ಲೆ ಕಂಪನಿ ಒಪ್ಪಿಕೊಂಡಿರುವ ಬಗ್ಗೆ ಪ್ರಮುಖ ಮಾಧ್ಯಮಗಳು ವರದಿ ಮಾಡಿವೆ.

ನೆಸ್ಲೆ ಕಂಪೆನಿಯ ಮ್ಯಾಗಿ, ನೆಸ್ಕೇಫ್ ಕಾಫಿ ಮುಂತಾದ ಆಹಾರ ಉತ್ಪನ್ನಗಳು ಆರೋಗ್ಯಪೂರ್ಣವಲ್ಲ ಎಂದು ನೆಸ್ಲೆ ಕಂಪನಿಯು ಹೇಳಿರುವುದಾಗಿ ವರದಿ ತಿಳಿಸಿದೆ. ಕೆಲವು ವರ್ಷಗಳ ಹಿಂದೆಯೇ ಮ್ಯಾಗಿ ಸೇರಿದಂತೆ ವಿವಿಧ ಆಹಾರ ಉತ್ಪನ್ನಗಳಲ್ಲಿ ವಿಷಕಾರಿ ಸೀಸದ ಅಂಶವಿದೆ ಎಂದು ಸರಕಾರವು ನಿಷೇಧ ಹೇರಿತ್ತು. ತದನಂತರ ಸುಧಾರಿತ ಹಲವು ಕ್ರಮಗಳ ಬಳಿಕ ಮರು ಮಾರುಕಟ್ಟೆಗೆ ಅನುಮತಿ ನೀಡಲಾಗಿತ್ತು.

Also Read  ಅರಂತೋಡು: ಮಾತೃ ಕೃಪಾ ಇಂಡಸ್ಟ್ರೀಸ್ ಶುಭಾರಂಭ

 

 

 

error: Content is protected !!
Scroll to Top