ಟ್ಯೂಷನ್ ಜೊತೆಗೆ ಪ್ರೇಮಪಾಠ ಹೇಳಿಕೊಟ್ಟ ಟೀಚರ್..! ➤ ಬಳಿಕ ಮಾಡಿದ್ದೇನು ಗೊತ್ತೇ..?

(ನ್ಯೂಸ್ ಕಡಬ) newskadaba.com ಹರಿಯಾಣ, ಜೂ.03. ಕೊರೋನಾ ಸೋಂಕಿನಿಂದಾಗಿ ಎಲ್ಲೆಡೆ ಲಾಕ್‍ಡೌನ್ ಜಾರಿಯಲ್ಲಿದ್ದರೆ ಇಲ್ಲೊಬ್ಬಾಕೆ ಶಿಕ್ಷಕಿ ಟ್ಯೂಷನ್ ಕೊಡುತ್ತಾ ಕೊಡುತ್ತಾ ಪಿಯುಸಿ ವಿದ್ಯಾರ್ಥಿಯೊಂದಿಗೆ ಪರಾರಿಯಾಗಿದ್ದಾಳೆ.

ಈ ಘಟನೆಯು ಹರಿಯಾಣದ ಪಾಣಿಪತ್​ನಲ್ಲಿ ನಡೆದಿದ್ದು, ಕೊರೊನಾದಿಂದಾಗಿ ಶಾಲೆ ಕಾಲೇಜುಗಳು ಮುಚ್ಚಿರುವ ಹಿನ್ನೆಲೆಯಲ್ಲಿ ಶಿಕ್ಷಕಿಯು ವಿದ್ಯಾರ್ಥಿಗೆ ಟ್ಯೂಷನ್ ನೀಡುತ್ತಿದ್ದರು ಎನ್ನಲಾಗಿದೆ. ಟ್ಯೂಷನ್ ಗೆಂದು ವಿದ್ಯಾರ್ಥಿಯು ಶಿಕ್ಷಕಿಯ ಮನೆಗೆ ಪ್ರತೀದಿನವೂ ತೆರಳುತ್ತಿದ್ದು ನಾಲ್ಕು ಗಂಟೆಗಳ ಕಾಲ ಇವರಿಬ್ಬರೂ ಒಟ್ಟಿಗೆ ಇರುತ್ತಿದ್ದರು ಎನ್ನಲಾಗಿದೆ. ಟ್ಯೂಷನ್​ ಹೇಳಿಕೊಡುವುದರ ಮಧ್ಯೆ ಇವರಿಬ್ಬರ​ ನಡುವೆ ಪ್ರೀತಿ ಹುಟ್ಟಿದ್ದು ಇಬ್ಬರೂ ಇದೀಗ ಕಾಣೆಯಾಗಿದ್ದಾರೆ. ಮೇ 29ರಂದು ಟೀಚರ್​ ಮನೆಗೆ ಹೋದ ಮಗ ಮನೆಗೆ ಹಿಂತಿರುಗಿಲ್ಲ ಎಂದು ಕಾಣೆಯಾಗಿರುವ ಬಾಲಕನ ತಂದೆ ದೂರು ನೀಡಿದ್ದಾರೆ. ಸದ್ಯ ಕಾಣೆಯಾದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

Also Read  ಕಡಬ: ಕಂಬವೇರಿದ ಲೈನ್ ಮ್ಯಾನ್ ಗೆ ವಿದ್ಯುತ್ ಶಾಕ್ ➤ ಗಂಭೀರ ಗಾಯಗೊಂಡಿದ್ದ ಲೈನ್ ಮ್ಯಾನ್ ಮೃತ್ಯು

 

 

 

error: Content is protected !!
Scroll to Top